ಸ್ವಚ್ಛತೆಗಿರುವ ಪ್ರಾಮುಖ್ಯತೆ
ಉತ್ತಮ ಆರೋಗ್ಯಕ್ಕೆ ಸ್ವಚ್ಛತೆ ಅತ್ಯಗತ್ಯ. ಪ್ರವಾದಿ ﷺ ರವರು ಸ್ವಚ್ಛತೆ ವಿಶ್ವಾಸದ ಒಂದು ಭಾಗವೆಂದಿದ್ದಾರೆ. ಮತ್ತೊಂದೆಡೆ ಮಾಲಿನ್ಯವು ಪೈಶಾಚಿಕವೆಂದಿದ್ದಾರೆ. ಮಾಲಿನ್ಯದಿಂದ ಮನುಷ್ಯ ಮುಕ್ತನಾಗುವಾಗಲೇ ಆರೋಗ್ಯ ಉಳ್ಳವನಾಗುತ್ತಾನೆ. ಪ್ರವಾದಿ ﷺ ರು ಸಾಮಾನ್ಯ ಆರಾಧನಾ ಸಂದರ್ಭಗಳಲ್ಲೂ ತನ್ನ ಶರೀರಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಅದು ಅವರ ದಿನಚರಿ ಕೂಡ ಆಗಿತ್ತು. ದೇಹ ಮಾಲಿನ್ಯದಲ್ಲಿ ಬೆರೆತರೆ ಅದಕ್ಕಿರುವ ಸ್ವಚ್ಛತೆಯಂತೆ ದಿನಕ್ಕೆ ಐದು ಬಾರಿ ಉಝೂ..ಮೂಲಕ ಸ್ವಚ್ಛತೆಯ ದಾರಿಯನ್ನು ಬೋಧಿಸಿದರು. ಪ್ರತೀಕ್ಷಣ ಪ್ರವಾದಿ ﷺ ರವರು ಸ್ವಚ್ಛತೆಯ ಬಗ್ಗೆ ಪ್ರತ್ಯೇಕ ಗಮನ ಹರಿಸುತ್ತಿದ್ದರು. ಅದರಂತೆ ಶರೀರದ ಎಲ್ಲಾ ಕಡೆ ನೀರು ತಲುಪಿಸುವ ಸ್ಥಾನವನ್ನು ಕೂಡ ಹೇಳಿಕೊಟ್ಟರು. ಜನರು ಸೇರುವಲ್ಲಿ ಸ್ನಾನ ಮಾಡಿ ತೆರಳುವಂತೆ ಹೇಳಿದರು. ಜುಮಾ ನಮಾಜ್ ಗಾಗಿಯೂ, ಹಬ್ಬಕ್ಕಿರುವ ನಮಾಝ್ ಗೂ ತೆರಳುವಾಗ ಪ್ರತ್ಯೇಕ ಸ್ನಾನವನ್ನು ಸುನ್ನತ್ ಗೊಳಿಸಿದರು. ಸ್ವತಃ ಸ್ವಚ್ಛತೆಯೊಂದಿಗಿರೂದರ ಜೊತೆ ತಮ್ಮ ವಸ್ತ್ರ, ಮನೆ, ಮಸೀದಿ, ಪರಿಸರವೆಲ್ಲ ಸ್ವಚ್ಛತೆಯೊಂದಿಗಿಡಲು ಆದೇಶಿಸಿ ಅದನ್ನು ರೂಡಿ ಮಾಡಿಕೊಳ್ಳಲು ನೆನಪಿಸುತ್ತಿದ್ದವು. ಪ್ರವಾದಿ ﷺ ರವರು ಎಂದೂ ಆರೋಗ್ಯ ಪೂರ್ಣರಾಗಿರಲು ಕಾರಣ ಸ್ವಚ್ಛತೆಯೊಂದಿಗೆ ಅವರಿಗಿರುವ ಕಾಳಜಿಯಾಗಿದೆ. ದೇಹದ ಸ್ವಚ್ಛತೆಗಾಗಿ ಸದಾ ಅ...