ಶೈಖ್ ಜೀಲಾನಿ (ರ.ಅ)
ಶೈಖ್ ಜೀಲಾನಿ ( ರ )'ರವರ ಬಾಲ್ಯದ ಕರಾಮತ್'ಗಳು 〰️〰️〰️〰️〰️〰️〰️〰️ 〰️〰️〰️〰️〰️〰️〰️ ▪️ಶೈಖ್ ಜೀಲಾನಿ ( ರ ) ರವರು ಜನಿಸುವಾಗಲೇ ವಲಿಯ್ಯ್ ಎಂಬ ಪಟ್ಟವನ್ನು ಗಳಿಸಿದ್ದರು. 🔹 ಶೈಖ್ ಜೀಲಾನಿ ( ರ )ರವರ ತಾಯಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ.. ಸೀನಿದಾಗ ಅಲ್ ಹಮ್ದುಲಿಲ್ಲಾಹ್ ಎಂದು ಹೇಳಿದರೆ ಗರ್ಭಾಶಯದಲ್ಲಿರುವ ಮಗು ಗೌಸುಲ್ ಆಝಮ್ ರವರು "ಯರ್'ಹಮ್ಕುಮುಲ್ಲಾಹ್" ಎಂದು ಉತ್ತರಿಸುತ್ತಿದ್ದರು. (ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139 ) 🔹ಶೈಖ್ ಜೀಲಾನಿ ( ರ ) ರವರು ರಮಳಾನಿನ ಪ್ರಥಮ ದಿನ ಸೂರ್ಯೋದಯದ ಸಮಯದಲ್ಲಿ ಜನಿಸಿದರು. ಜನಿಸಿದಾಗಲೇ ಅವರ ತುಟಿಯಿಂದ "ಅಲ್ಲಾಹ್..! ಅಲ್ಲಾಹ್" ಎಂಬ ಶಬ್ದವು ಹೊರಬರುತ್ತಿತ್ತು (ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139) 🔹ಶೈಖ್ ಜೀಲಾನಿ ( ರ ) ರವರು ಜನಿಸಿದ ದಿನವೇ ಸೂರ್ಯಾಸ್ತಮಾನ ವಾಗುವವರೆಗೆ ತನ್ನ ತಾಯಿಯ ಮೊಲೆಹಾಲನ್ನು ಕುಡಿಯಲಿಲ್ಲ. ರಮಳಾನಿನ ಎಲ್ಲಾ ದಿವಸಗಳಲ್ಲೂ ಇದೇ ರೀತಿ ಮಗು ಜೀಲಾನಿ ( ರ ) ರವರು ಉಪವಾಸ ಆಚರಿಸುತ್ತಿದ್ದರು. ( ಬಹಜತುಲ್ ಅಸ್ರಾರ್ ಪುಟ-17 ) 🔹 ಶೈಖ್ ಜೀಲಾನಿ ( ರ ) ರವರು ತನ್ನ 5 ನೇ ವಯಸ್ಸಿನಲ್ಲಿ ಪವಿತ್ರ ಕುರ್‌ಅನ್ ಪಠನ ಅಭ್ಯಸಿಸಲು ಗುರುವನ್ನು ಸಮೀಪಿಸಿದರು. ಉಸ್ತಾದ್ ಅಊದ್ಸು ಹೇಳಿ ಕೊಟ್ಟರು. ಆಗ ಬಾಲಕ ಶೈಖ್ ಜಿಲಾನಿಯವರು ಅವೂದ್ಸು, ಬಿಸ್ಮಿ ಯೊಂದಿಗೆ ಖುರ್‌ಆನ್‌ನ ಒಂದರಿಂದ 18 ಜುಝುಅ್ ವ...