ಮೂಗುತಿ

ಮೂಗು ಚುಚ್ಚುವುದು
ನಮ್ಮ ಕಡೆಗಳಲ್ಲಿ ತೀರಾ ಕಂಡುಬರದ ಒಂದು ಸಂಗತಿಯಾಗಿತ್ತು ಸ್ತ್ರೀಯರು ಮೂಗು ಚುಚ್ಚುವುದು ಅಥವಾ ಮೂಗುತಿ ಹಾಕುವುದು.ಅದು ಕೆಲವೇ ಕೆಲವು ವಿಭಾಗ ಜನರ ಮಾತ್ರ ಸಂಸ್ಕೃತಿಯಾಗಿತ್ತು.ಆದರೆ ಈಗೀಗ ಹಲವು ಕಡೆಗಳಲ್ಲಿ ವ್ಯಾಪಿಸುತ್ತಾ ಮುಸ್ಲಿಮರಲ್ಲಿ ಕೂಡ ಇದು ಹೆಚ್ಚುತ್ತಿದೆ.ಅದರ ಕುರಿತು ಒಬ್ಬರು ವಿವರಣೆ ಕೇಳಿದಾಗ ಅದರ ಕುರಿತು ತಿಳಿಯಲು ಪ್ರಯತ್ನಿಸಿದೆ.
ಶಾಫಿಈ ಮದ್ ಹಬ್ ನ ಕುರಿತಾಗಿದೆ ಚರ್ಚೆ.ಶಾಫಿಈ ಮದ್ ಹಬ್ ನಲ್ಲಿ ಹೆಣ್ಣಿಗೆ ಆಭರಣ ಧರಿಸುವುದು ಅನುವದನೀಯವಾಗಿದೆ.ಕಿವಿಗೆ ಕಿವಿಯೋಲೆ ಕುತ್ತಿಗೆಗೆ ಕಂಠಹಾರ ಕೈಬಳೆ ಈ ರೀತಿ ಎಲ್ಲವೂ ಗ್ರಂಥಗಳಲ್ಲಿ ವಿವರಿಸುತ್ತಿದೆ.ಅದೆಲ್ಲದರ ಉದ್ದೇಶ ಹೆಣ್ಣಿನ ಸೌಂದರ್ಯ ಹೆಚ್ಚಿಸುವುದು ಅಷ್ಟೇ.

ಇಮಾಂ ನವವಿ (ರ) ಅವರ ಗ್ರಂಥವಾದ ಶರಹುಲ್ ಮುಹದ್ದಬ್ ನ 3ನೇ ಭಾಗ 580/81ನೇ ಪೇಜುಗಳಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ : ಸ್ತ್ರೀಗಳಿಗೆ ಚಿನ್ನ,ಬೆಳ್ಳಿಯನ್ನೆಲ್ಲ ಆಭರಣವಾಗಿ ಉಪಯೋಗಿಸಬಹುದು ಅಂದರೆ ಸರ, ಬಳೆ , ಕಾಲ್ಗೆಜ್ಜೆ, ಕಿವಿಯೋಲೆ ಉಂಗುರ ಈ ರೀತಿಯೆಲ್ಲ ವಿವರಿಸಲಾಗಿದೆ.ಹಾಗಾದರೆ ಮೂಗುತಿ ಕೂಡ ಅನುವದನೀಯವಲ್ಲವೇ ಎಂಬ ಪ್ರಶ್ನೆ ಸಾಧಾರಣವಾಗಿ ಮೂಡಿಬರುತ್ತದೆ ಅದಕ್ಕೆ ಉತ್ತರ ಅನುವದನೀಯವಲ್ಲ ಎಂದಾಗಿದೆ.ಅದು ಹರಾಮ್ ಆಗಿದೆ ಎಂದು ಕರ್ಮಶಾಸ್ತ್ರ ಗ್ರಂಥಗಳಲ್ಲಿ ಮಹಾತ್ಮರು ಹೇಳಿದ್ದು ಸ್ಪಷ್ಟವಾಗಿ ಕಾಣಬಹುದು.ಝೈನುದ್ದೀನ್ ಮಖ್ದೂಮ್ (ರ)ಅವರ ಫತುಹುಲ್ ಮುಹೀನ್ ನಲ್ಲಿ ಅತ್ಯಂತ ನಿಖರವಾಗಿ ಹೇಳುತ್ತಾರೆ : ಮೂಗು ಚುಚ್ಚುವುದು ಮುತುಲಕ್ ಹರಾಮ್ ಆಗಿದೆ.ಮುತುಲಕ್ ಎಂದರೆ ಉದ್ದೇಶ ಸಯ್ಯಿದುಲ್ ಬಕರೀ (ರ) ಇಹಾನತ್ ತ್ವಾಲಿಬೀನ್ ಎಂಬ ಗ್ರಂಥದ 4 ನೇ ಭಾಗ 267 ಪೇಜ್ ನಲ್ಲಿ ವಿವರಿಸುತ್ತಾರೆ : ಅದು ಗಂಡು ಅಥವಾ ಹೆಣ್ಣು ಯಾರಿಗೇ ಆಗಲಿ ಮೂಗು ಚುಚ್ಚುವುದು ಹರಾಮ್ ಆಗಿದೆ.ಪ್ರತ್ಯೇಕವಾಗಿ ಮೂಗಿನಲ್ಲಿ ಆಭರಣ ಧರಿಸಲು ಮೂಗು ಚುಚ್ಚುವುದು (ನಿಷಿದ್ಧ) ಹರಾಮ್ ಆಗಿದೆ. ಕಾರಣವಿಲ್ಲದೆ ಶರೀರದ ಯಾವುದೇ ಭಾಗಕ್ಕೆ ಚುಚ್ಚುವುದು ಅಥವಾ ರಂಧ್ರ ಮಾಡುವುದು ಇಸ್ಲಾಂ ವಿರೋಧಿಸಿದ ಕಾರ್ಯಕೂಡ.
ಇಬ್ನ್ ಹಜರುಲ್ ಹೈತಮಿ (ರ) ತುಹುಫತುಲ್ ಮುಹ್ ತಾಜ್ ಎಂಬ ಗ್ರಂಥದ 9ನೇ ಭಾಗ 399ನೇ ಪೇಜ್ನಲ್ಲಿ ಈ ವಿಷಯದ ಕುರಿತು ಅತ್ಯಂತ ವಿಶಾಲವಾಗಿ ಚರ್ಚೆ ಮಾಡುತ್ತಾರೆ:ಬೆಳ್ಳಿ ಅಥವಾ ಸ್ವರ್ಣದಿಂದ ಮಾಡಿದ ಒಂದು ರಿಂಗನ್ನು ಧರಿಸಲು ಮೂಗು ಚುಚ್ಚುವುದು ಅದು ಮುತುಲಕ್ ಹರಾಮ್ ಆಗಿದೆ.ಹರಾಮ್ ಆಗಲು ಕಾರಣ ತಿಳಿಸುತ್ತಾರೆ : ಅದರಲ್ಲಿ ಯಾವುದೇ ರೀತಿಯ ಪ್ರತ್ಯೇಕ ಸೌಂದರ್ಯವಿಲ್ಲ.ಉಳಿದ ಅಂಗಾಂಗಳಿಗೆ ಆಭರಣ ಧರಿಸುವುದು ಉಂಗುರ ಸರ ಎಲ್ಲವೂ ಅದು ಒಂದು ರೀತಿ ಹೆಣ್ಣಿನ ಸೌಂದರ್ಯಕ್ಕಾಗಿದೆ ಆದರೆ ಮೂಗಿನಲ್ಲಿ ಆ ರೀತಿ ಆಭರಣ ಧರಿಸುವುದರಲ್ಲಿ ಯಾವ ಸೌಂದರ್ಯವೂ ಇಲ್ಲ ಕೆಲವರು ಸೌಂದರ್ಯ ಇದೆ ಎಂದು ವಾದಿಸಿದರೆ ಅದು ಅಂಗೀಕರಿಸಲು ಯೋಗ್ಯವಲ್ಲ.ಅದು ಹರಾಮ್ ಆಗಿದೆ.ಆದರೆ ಯಾವುದೋ ಕೆಲವರು ಅದನ್ನು ಅನುವದನೀಯ ಎಂದು ಸಮರ್ಥಿಸುವವರು ಇರಬಹುದು ಆದರೆ ಅದನ್ನು ಪರಿಗಣಿಸಲಾಗುವುದಿಲ್ಲ ಅದು ಸರಿಯಲ್ಲ ಎಂದು ಇಬ್ನ್ ಹಜರುಲ್ ಹೈತಮಿ (ರ) ವಿವರಿಸುವುದು ಕಾಣಬಹುದು.ಇನ್ನು ಎಲ್ಲೋ ಯಾರೋ ಆ ರೀತಿ ಮಾಡಿದ್ದಾರೆ ಎಂಬುವುದು ಇಸ್ಲಾಂ ಗೆ ಒಮ್ಮೆಯೂ ಪುರಾವೆ ಆಗದು.ಅದು ಅವರ ಆಚಾರಗಳಲ್ಲಿ ಒಂದು ಆಗಿರಬಹುದು.ಇಸ್ಲಾಂ ನ ನಿಯಮಗಳು ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ.ಅವರು ಮಾಡಿದ್ದಾರೆ ಇವರು ಮಾಡಿದ್ದಾರೆ ಎಂಬ ಹೇಳಿಕೆಗಳು ಸಮರ್ಥನೆಗಳು ಅಂಗೀಕೃತವಲ್ಲ.ಶಾಫಿಈ ಮದ್ ಹಬ್ ನ ಅಧಿಕೃತ ಮುಫ್ತಿ ಎಂದು ಕರೆಯಲ್ಪಡುವ ಇಮಾಂ ಇಬ್ನ್ ಹಜರುಲ್ ಹೈತಮಿ (ರ)ನಂತಹ ಪ್ರಮುಖರೆಲ್ಲ ಹರಾಮ್ ಆಗಿದೆ ಎಂದು ಹೇಳಿದ ಬಳಿಕ ಅದನ್ನು ಪುನಃ ಅನುವದನೀಯ ಎಂದು ಸಮರ್ಥಿಸುವುದರಲ್ಲಿ ಅರ್ಥವಿಲ್ಲ.ಅವರೇ ಹೇಳುತ್ತಾರೆ ಕೆಲವೇ ಕೆಲವರಿಗೆ ಭಿನ್ನಾಭಿಪ್ರಾಯವಿದೆ ಎಂದು.ಅಂತಹ ಭಿನ್ನತೆಗಳು ಫಿಕಹಿ ಮಸ್ ಅಲಗಳಲ್ಲಿ ಧಾರಳವಿದೆ ಅದರಲ್ಲಿ ಎಲ್ಲವೂ ಪರಿಗಣಿಸಲಾಗುವುದಿಲ್ಲ.ಇನ್ನು ಮೂಗಿನ ಮೇಲೆ ಚುಚ್ಚದೆ ಅಂಟಿಸಿ ಇಡುವುದಾದರೆ ಅದನ್ನು ಹರಾಮ್ ಎಂದು ಹೇಳಲು ಸಾಧ್ಯವಿಲ್ಲ.ಆದರೆ ಯಾವುದಾದರೂ ಒಂದು ಅನ್ಯವಿಭಾಗದ ಜನರ ಸಂಸ್ಕೃತಿಯತ್ತ ಸಾಮ್ಯತೆಯಿರುವುದರಿಂದ ಅದನ್ನು ಮಾಡದೆ ಇರುವುದಾಗಿದೆ ಉತ್ತಮ.ಆದರೆ ಅದನ್ನು ಹರಾಮ್ ಎನ್ನಲಾಗದು ಎಂದು ಉಲಾಮಾಗಳು ವಿವರಿಸುತ್ತಾರೆ.

Comments

Popular posts from this blog

ಖುರ್‌ಆನ್ ಹೇಳಿದ ಕರಾಮತ್

ಇಸ್ತಿಗಾಸ