ಶೈಖ್ ಜೀಲಾನಿ (ರ.ಅ)
ಶೈಖ್ ಜೀಲಾನಿ ( ರ )'ರವರ ಬಾಲ್ಯದ ಕರಾಮತ್'ಗಳು
〰️〰️〰️〰️〰️〰️〰️〰️ 〰️〰️〰️〰️〰️〰️〰️
▪️ಶೈಖ್ ಜೀಲಾನಿ ( ರ ) ರವರು ಜನಿಸುವಾಗಲೇ ವಲಿಯ್ಯ್ ಎಂಬ ಪಟ್ಟವನ್ನು ಗಳಿಸಿದ್ದರು.
🔹 ಶೈಖ್ ಜೀಲಾನಿ ( ರ )ರವರ ತಾಯಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ..
ಸೀನಿದಾಗ ಅಲ್ ಹಮ್ದುಲಿಲ್ಲಾಹ್ ಎಂದು ಹೇಳಿದರೆ ಗರ್ಭಾಶಯದಲ್ಲಿರುವ ಮಗು ಗೌಸುಲ್ ಆಝಮ್ ರವರು "ಯರ್'ಹಮ್ಕುಮುಲ್ಲಾಹ್" ಎಂದು ಉತ್ತರಿಸುತ್ತಿದ್ದರು.
(ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139 )
🔹ಶೈಖ್ ಜೀಲಾನಿ ( ರ ) ರವರು ರಮಳಾನಿನ ಪ್ರಥಮ ದಿನ ಸೂರ್ಯೋದಯದ ಸಮಯದಲ್ಲಿ ಜನಿಸಿದರು.
ಜನಿಸಿದಾಗಲೇ ಅವರ ತುಟಿಯಿಂದ "ಅಲ್ಲಾಹ್..! ಅಲ್ಲಾಹ್" ಎಂಬ ಶಬ್ದವು ಹೊರಬರುತ್ತಿತ್ತು
(ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139)
🔹ಶೈಖ್ ಜೀಲಾನಿ ( ರ ) ರವರು ಜನಿಸಿದ ದಿನವೇ ಸೂರ್ಯಾಸ್ತಮಾನ ವಾಗುವವರೆಗೆ ತನ್ನ ತಾಯಿಯ ಮೊಲೆಹಾಲನ್ನು ಕುಡಿಯಲಿಲ್ಲ. ರಮಳಾನಿನ ಎಲ್ಲಾ ದಿವಸಗಳಲ್ಲೂ ಇದೇ ರೀತಿ ಮಗು ಜೀಲಾನಿ ( ರ ) ರವರು ಉಪವಾಸ ಆಚರಿಸುತ್ತಿದ್ದರು.
( ಬಹಜತುಲ್ ಅಸ್ರಾರ್ ಪುಟ-17 )
🔹 ಶೈಖ್ ಜೀಲಾನಿ ( ರ ) ರವರು ತನ್ನ 5 ನೇ ವಯಸ್ಸಿನಲ್ಲಿ ಪವಿತ್ರ ಕುರ್‌ಅನ್ ಪಠನ ಅಭ್ಯಸಿಸಲು ಗುರುವನ್ನು ಸಮೀಪಿಸಿದರು.
ಉಸ್ತಾದ್ ಅಊದ್ಸು ಹೇಳಿ ಕೊಟ್ಟರು.
ಆಗ ಬಾಲಕ ಶೈಖ್ ಜಿಲಾನಿಯವರು ಅವೂದ್ಸು, ಬಿಸ್ಮಿ ಯೊಂದಿಗೆ ಖುರ್‌ಆನ್‌ನ ಒಂದರಿಂದ 18 ಜುಝುಅ್ ವರೆಗೆ ಕಾಣದೆ ಪಾರಾಯಣ ಮಾಡಿದರು.
ಬಾಲಕ ಶೈಖ್ ಜೀಲಾನಿಯವರ ಈ ಅದ್ಭುತ ಬೆಳವಣಿಗೆಗೆ ಬೆಕ್ಕಸ ಬೆರಗಾದ ಉಸ್ತಾದರು ಮುಂದೆ ಓದುವಂತೆ ಹೇಳಿದರು.
ಆದರೆ ಬಾಲಕ ಶೈಖ್ ಜೀಲಾನಿಯವರು ಹೇಳಿದರು.
ಉಸ್ತಾದ್.. ನಾನು ತಾಯಿಯ ಗರ್ಭಾಶಯದಲ್ಲಿದ್ದಾಗಲೇ ತಾಯಿ 18 ಜುಝುಅ್‌ವರೆಗೆ ಖುರ್‌ಆನ್ ಪಾರಾಯಣ ಮಾಡಿದ್ದನ್ನು ಕೇಳಿ ನಾನು ಕಂಠಪಾಟ ಮಾಡಿದ್ದೆನು.
ಆದರ ಆಚೆ ಕಂಠಪಾಠ ಮಾಡಲಿಲ್ಲ
🔹ಯಾವಾಗಲಾದರೂ ಆಟ ಆಡಲು ಬಯಸಿದರೆ,
ಶೈಖ್ ಜೀಲಾನಿ ( ರ )'ರವರಿಗೆ
"ನಾವು ನಿನ್ನನ್ನು ಸೃಷ್ಟಿಸಿರುವುದು ಆಟವಾಡಲು ಅಲ್ಲ"
ಎಂಬ ದೈವೀಕ ಧ್ಬಣಿಯು ಕೇಳಿಸುತ್ತಿತ್ತು.
(ಅಲ್ ಹಖೀಕಿ ಫಿಲ್ ಹದಾಯಿಖ್ ಪುಟ-140)
🔹. ಶೈಖ್ ಜೀಲಾನಿ ( ರ ) ರವರು ಮದರಸಕ್ಕೆಂದು ಹೋದಾಗ,
ಅಲ್ಲಾಹನ ಸ್ನೇಹಿತನಿಗೆ ಸ್ಥಳಾವಕಾಶ ನೀಡಿರಿ."
ಎಂಬ ಅಶರೀರವಾಣಿ ಕೇಳಿಸುತ್ತಿತ್ತು.
(ಬಹ್‌ಜತುಲ್ ಅಸ್ರಾರ್, ಪುಟ-48)
➖➖➖➖➖➖➖➖ ➖➖➖➖➖➖➖➖
Comments
Post a Comment