ಇಮಾಂ ರಾಫಿಈ
ಇಮಾಂ ರಾಫಿಈ
ಇಸ್ಲಾಮಿಕ್ ಚರಿತ್ರೆಯಲ್ಲಿ ಶೈಕ್ಷಣಿಕವಾಗಿ, ಆಧ್ಯಾತ್ಮಿಕ ಲೋಕದಲ್ಲಿ ಮಹತ್ತರವಾಗಿ ಕಾರ್ಯಾಚರಿಸಿ ಗುರುತಿಸಿಕೊಂಡ ಅನೇಕ ಮಹಾತ್ಮರಲ್ಲೊಬ್ಬರು ಇಮಾಂ ರಾಫೀ ಇವರು ಹಿಜ್ರಾ 6ನೇ ಶತಮಾನದ ಉತ್ತರಾರ್ಧದಲ್ಲಿ (ಹಿ.555 AD 1160) ಇರಾನಿನ ಖಸ್ಟೀರ್ ಎಂಬ ಗ್ರಾಮದಲ್ಲಿ ಅಬ್ದುಲ್ ಕರೀಮ್ ಬಿನ್ ಮುಹಮ್ಮದ್ ಅಬುಲ್ ಖಾಸಿಮ್ ರಾಫಿಈ ಎಂಬ ವಿದ್ವಾಂಸ ಜನಿಸಿದರು. ಕುಟುಂಬ ಪರಂಪರೆಯು ಪ್ರಮುಖ ಸ್ವಹಾಬಿ ರಾಫೀಲ್ ಬಿನ್ ಖದೀಜ್ ಎಂಬ ತನ್ನ ಮುತ್ತಜ್ಜರಿಗೆ ಸೇರಿಸಿಕೊಂಡಿದ್ದರಿಂದ ಅವರು ರಾಫೀಲ್ ಎಂಬ ಹೆಸರಿನಿಂದ ಕರೆಯಲ್ಪಟ್ಟರು. ಖಸ್ಟೀನ್‌ನಲ್ಲಿರುವ 'ರಾಫಿಆನ್' ಎಂಬ ಪ್ರದೇಶಕ್ಕೆ ಸೇರಿಸಲ್ಪಟ್ಟ ಕಾರಣ ಹಾಗೆ ಕರೆಯಲಾಗುತ್ತದೆ ಎಂದೂ ಇಮಾಮ್ ನವವಿ ಅಭಿಪ್ರಾಯಪಟ್ಟಿದ್ದಾರೆ. ಪೂರ್ಣ ಹೆಸರು ಅಬುಲ್ ಖಾಸಿಮ್ ಇಮಾಮುದ್ದೀನ್ ಅಬ್ದುಲ್ ಕರಿಮುಬ್ಬು ಮುಹಮ್ಮದಿಬ್ಬು ಅಬ್ದುಲ್ ಕರೀಮ್ ಅಬ್ಬುಲ್ ಫಲ್ಲ್ ರಾಫೀ
ಪಾಂಡಿತ್ಯವನ್ನು ಕಂಡರಿತ ವಿದ್ವಾಂಸ, ಜಗತ್ತು ಅಲಿಮುಲ್ ಅಲ್ಲಾಮಾ,ಇಮಾಮುಲ್ ಮಿಲ್ಲತಿ ವದ್ದೀನ್, ಹುಜ್ಜತುಲ್ ಇಸ್ಲಾಮಿ ವಲ್ ಮುಸ್ಲಿಮೀನ್, ಶೈಖ್ಶಾ ಫೀಯ್ಯ, ಆಲಿಮುಲ್ ಅರಬಿ ವಲ್ ಅಜಂ, ಸ್ವಾಹಿಬು ಶರ್ಹಿಲ್ ಕಬೀರ್ ಮುಂತಾದ ಗೌರವ ನಾಮಗಳಿಂದ ಮಹಾತ್ಮರನ್ನು ಗೌರವಿಸಲ್ಪಡುತ್ತಾರೆ. ಇವರು ಹಿಜರಿ 557 ಇಸ್ಬಹಾನಿನ ಖಸ್ವೀನ್ ಪ್ರಾಂತ್ಯದಲ್ಲಿ ಜನಿಸಿದರು.(ಹಿಜರಿ555 ಎಂಬ ಅಭಿಪ್ರಾಯ ಇದೆ)
ಮನೆತನ
ಶೈಕ್ಷಣಿಕವಾಗಿ ಔನ್ನತ್ಯವನ್ನು ಪಡೆದ ಕುಟುಂಬದಲ್ಲಾಗಿತ್ತು ಇಮಾಮರ ಜನನ. ತಂದೆ ಅಬುಲ್ ಫಕ್ಸ್ ಮುಹಮ್ಮದ್ ಕರ್ಮಶಾ ಶಾಫಿ ಮದ್ದಬಿನ ಮುಷ್ಟಿಯೂ ಆಗಿದ್ದರು. ತಂದೆ ಯ ಮಹಿಮೆಗಳನ್ನು ಸಾರುವ ಇಮಾಮ ರು ತನ್ನ ಕಿಬಾದಿನ ಹಲವು ಕಡೆಗಳಲ್ಲಿ ಅವರನ್ನು ಸ್ಮರಿಸಿದ್ದಾರೆ. ಅಸ್‌ಅದು ರುಕಾನಿ ಅವರ ಮಗಳು ಸ್ವಫಿಯಾ ಇಮಾಮರ ತಾಯಿ, ಇಸ್ಟಹಾನ್, ನೈಸಾಬುರ್, ಬಾಗ್ದಾದ್ ಮುಂತಾದ ಸ್ಥಳಗಳಲ್ಲಿ ಅನೇಕ ಗುರುವರ್ಯರಿಂದ ಹದೀಸ್ ಕಲಿತವರಿಗೆ ಇದ್ದಾರೆ ಆ ಮಾತೆ. ಈ ಹಿನ್ನೆಲೆಯಲ್ಲಿ ಬೆಳೆದಿದ್ದರಿಂದ ಚಿಕ್ಕಂದಿನಿಂದಲೇ ಜ್ಞಾನದ ತಾಜಾ ಗಾಳಿಯಲ್ಲಿ ಉಸಿರಾಡುತ್ತಾ ಬೆಳೆಯಲು ಇಮಾಮರಿಗೆ ಸಾಧ್ಯವಾಯಿತು.
ಶಾಫೀಈ ಮದ್ದಬ್‌ನಲ್ಲಿ ಶೈಖಾನಿ ಎಂದರೆ ಇಮಾಂ ನವವಿ ಮತ್ತು ಇಮಾಮ್ ರಾಫೀಈ ಆಗಿದ್ದಾರೆ. ಅಂತಹ ಉನ್ನತ ಸ್ಥಾನಮಾನವನ್ನು ಪಡೆದ ಇಮಾಮರು ಶ್ರೇಷ್ಠ ವಿದ್ವಾಂಸ ಸರಣಿಯಲ್ಲಿ ಪ್ರಮುಖರಾಗಿದ್ದಾರೆ.ಶಾಫೀಈ ಕರ್ಮಶಾಸ್ತ್ರದಲ್ಲಿ ಅನೇಕ ಪ್ರಖ್ಯಾತ ವಿದ್ವಾಂಸರು ಇದ್ದರೆ, ಇಮಾಂ ರಾಫೀಈ, ನವವಿ 4 ರವರ ಪಾಂಡಿತ್ಯಪೂರ್ಣ. ತೀರ್ಪು(ಫತ್ವ)ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತು ಶೈಖಾನಿ ಎಂದೇ ಇಂದಿಗೂ ಕರ್ಮ ಶಾಸ್ತ್ರ ಗ್ರಂಥಗಳು ಕರೆಯಲ್ಪಡುವ ಈ ಮಹಾನ್ ವಿದ್ವಾಂಸರು ಕರ್ಮಶಾಸ್ತ್ರದಲ್ಲಿನ ಸಮಸ್ಯೆಗಳಿಗೆ ಇಂದಿಗೂ ಪರಿಹಾರವಾಗಿದ್ದಾರೆ.
ಸಾಂಪ್ರದಾಯಿಕ ವ್ಯವಸ್ಥೆಯಿತ್ತು. ಓದಿ, ಕಲಿತು ನಂತರ ಉನ್ನತ ವಿದ್ಯೆಗೆ ಬೇರೆ ಕಾಲೇಜುಗಳಿಗೆ ಸೇರಿಸುವುದು ಅಂದಿನ ವಾಡಿಕೆಯಾಗಿತ್ತು. ಆದರೆ ಇಮಾಮ್ ರಾಫಿಈ ಜ್ಞಾನದ ವಿವಿಧ ಶಾಖೆಗಳಲ್ಲಿ ಪರಿಣಿತರಾಗಿದ್ದರಿಂದ ಹೆಚ್ಚುಕಾಲ ತನ್ನ ತಂದೆಯಿಂದಲೇ ಅಧ್ಯಯನ ಮಾಡಿದರು. ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆಯ ಹದೀಸ್ ತರಗತಿಗೆ ಹಾಜರಾಗಿ ಹದೀಸ್ ಜ್ಞಾನ ಕರಗತ ಮಾಡಿದ ಇಮಾಮರು ತಂದೆಯಿಂದಲೇ ಕರ್ಮಶಾಸ್ತ್ರ ಜ್ಞಾನವನ್ನೂ ಕಲಿತರು. ಖುರ್‌ಆನ್ ವ್ಯಾಖ್ಯಾನ, ಭಾಷಾಶಾಸ್ತ್ರ ವಿಜ್ಞಾನಗಳಂತಹ ಪಾಂಡಿತ್ಯಪೂರ್ಣ ಕ್ಷೇತ್ರಗಳಲ್ಲಿಯೂ ಇಮಾಮರ ಸಾಧನೆ ಅಪಾರವಾಗಿತ್ತು. ತನ್ನ ಗುರುಗಳಿಂದ ಪಡೆದ ಅಧ್ಯಾತ್ಮಿಕತೆ,ತಾಳ್ಮೆ, ನಿಸ್ವಾರ್ಥತೆ, ಅಪಾರ ಜ್ಞಾನದಿಂದ ಧಾರ್ಮಿಕ ಸೇವೆಯಲ್ಲಿ ಅವರು ಸಕ್ರಿಯರಾದರು. ಇದರಿಂದಾಗಿ ನಾಡಿನಾದ್ಯಂತ ಇಮಾಮರಿಗೆ ಅಸಂಖ್ಯಾತ ಶಿಷ್ಯಂದಿರು ಬೆಳೆದು ಬಂದರು.
ಗುರುವೃಂದ
ಅಬೂಹಾಮಿದ್ ಅಬ್ದುಲ್ಲಾಹಿಬ್ಬು ಅಬಿಲ್ ಫುತುಹ್ , ಖಾತ್ವಿಬ್ ಅಬೂ ನಸ್ಯ ಹಾಮಿದುಬ್ಬು ಮಹ್ಮದ್ ಪಿ, ಅಬೂಬಕರ್ ಅಬ್ದುಲ್ಲಾಹಿಬ್ಬು ಇಬ್ರಾಹಿಂ, ಅಹ್ಮದಿಬ್ಬು ಇಸ್ಮಾಯಿಲ್ 4, ಅಬುಲ್ ಹಸನ್ ಅಲಿಯ್ಯುಬ್ಬು ಉಬೈದುಲ್ಲಾಹಿ ಎ. ಇಮಾಂ ಅಬೂಸುಲೈಮಾನ್ ಅಹ್ಮದುಬ್ಬು ಹಸ್ನವಯ್ಯ, ಅಬ್ದುಲ್ ಅಝೀಝ್ ಬ್ಯುಲ್ ಖಲೀಲ್ , ಅಬೂಬಕರ್ ಮುಹಮ್ಮದಿಬ್ಬು ಅಬಿತ್ವಾಲಿಬ್ ಮಿ, ಹಾಫೀಳ್ ಅಬುಲ್ ಅಲ ಊಬ್ಬುಲ್ ಹಸನ್ ಮಿ, ಅಬುಲ್ ಫತ್ ಮುಹಮ್ಮದಿಬ್ಬು ಅಬುದಿಲ್ ಬಾಖ ಮೊದಲಾದ ಮಹಾತ್ಮರು ಇಮಾಮರ ಪ್ರಮುಖ ಗುರುಗಳಾಗಿದ್ದರು.
ಶೈಖಾನಿಗಳು;
ಶಾಫಿಈ ಮದ್ದಬ್‌ನ ಪಿಕ್ಸ್ ಗ್ರಂಥಗಳಲ್ಲಿ ಹಲವು ಕಡೆ "ಶೈಖಾನಿ"ಎಂದು ಕಾಣಬಹುದು. ಆ ಹೆಸರಿನಲ್ಲಿ ಕರ್ಮಶಾಸ್ತ್ರ ವಿದ್ವಾಂಸರೆಡೆಯಲ್ಲಿ ಪ್ರಸಿದ್ಧರಾದವರು ಇಮಾಮ್ ರಾಫೀಈಯೆ ಮತ್ತು ಇಮಾಮ್ ನವವಿ رضي عنه ಇಮಾಮ್ ಶಾಫೀಈ ಮತ್ತು ಇಮಾಮ್ ರಾಫೀಈ ನಡುವೆ ಸುಮಾರು 400 ವರ್ಷಗಳ ಅಂತರವಿದೆ. ಆ ನಡುವಿನ ಅವಧಿಯಲ್ಲಿ ಮದ್‌ಹಬ್‌ನಲ್ಲಿ ಅನೇಕ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಆಗ ಅಂದರೆ 7ನೇ ಶತಮಾನದಲ್ಲಿ ಇಮಾಮ್ ರಾಫೀಈ ರು ಶಾಫಿಈ ಮದ್ದಬ್‌ನ ಸೇವೆಯನ್ನು ಆರಂಭಿಸುವ ವೇಳೆ ಅಸ್ತಿತ್ವದಲ್ಲಿದ್ದ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಅನ್ವೇಷಿಸುತ್ತ ಸೂಕ್ತ ಉತ್ತರವಾಗಿ ಮೂರು ಪ್ರಸಿದ್ಧ ಕೃತಿಗಳನ್ನು ಹೊರ ತಂದರು.
ಕರ್ಮಶಾಸ್ತ್ರದಲ್ಲಿ ಎರಡು 'ಶೈಖಾನಿ'ಗಳಾದ ಇಮಾಂ ರಾಫೀಈ ಮತ್ತು ಇಮಾಂ ನವವಿ ಅವರು ಸಮಕಾಲೀನರಾಗಿರಲಿಲ್ಲ. ಇಮಾಮ್ ರಾಫೀಈ ರವರ ಮರಣದ ಸುಮಾರು ಏಳು ವರ್ಷಗಳ ನಂತರವಾಗಿತ್ತು ಇಮಾಂ ನವವಿ ಜನನ. ನಮ್ಮ ವಿದ್ವಾಂಸರುಗಳು ಮಸ್‌ಅಲವನ್ನು ನಿರ್ಧರಿಸಲು ಬಳಸುವ رضى عنه ಮುಖ್ಯ ಗ್ರಂಥಗಳಾದ ತುಜ್ಞಾ, ನಿಹಾಯಾ ಮತ್ತು ಮುಷ್ಟಿ ಇದು ಇಮಾಮ್ ನವವಿಯವರ ಮಿನಾಜು ತ್ವಾಲಿಬಿನ ವ್ಯಾಖ್ಯಾನಗಳಾಗಿವೆ. ಮಿನ್ಹಾಜ್ ಇಮಾಮ್ se ರಾಫೀಈ ಫ್ರ ಅವರ ಅಲ್ ಮುಹರರ್‌ನ ನಿರೂಪಣೆಯಾಗಿದೆ. ಅಲ್ ಮುಹರ್ رضى عنه ಇಮಾಮ್ ಗಝಾಲಿ 44 ಅವರ ವಜಿಜ್‌ನ ಸಂಕ್ಷಿಪ್ತ ರೂಪವಾಗಿದೆ. ರಾತ್ರಿ ನಿದ್ದೆಯಿಲ್ಲದೆ ಗ್ರಂಥ ಬರೆಯುವುದರಲ್ಲಿ ನಿರತವಾಗಿತ್ತು ಆ ಧನ್ಯ ಬದುಕು.
ಇಬ್ಬು ಖಾಳಿ ಶುದ್ಧ ಹೇಳುತ್ತಾರೆ ; “ನಮ್ಮ ಸಹಚರರಲ್ಲಿ ಇತರ ಹೆಚ್ಚಿನ ಕರ್ಮಶಾಸ್ತ್ರವಿದ್ವಾಂಸರು ಅಧಿಕ ಪ್ರದೇಶಗಳಲ್ಲಿ ಅವಲಂಬಿಸುವುದು ಇಮಾಮ್ ರಾಫೀಈ ಮಿಸ್ಟ್ರಿ ಅವರ ಹೇಳಿಕೆಯನ್ನಾಗಿದೆ.
ತನಗಿಂತ ಮೊದಲು ಕಳೆದುಹೋದ ಅನೇಕ ವಿದ್ವಾಂಸರನ್ನು ಮೀರಿ ನಿಂತ ಅವರನ್ನು ಅವರ ಸಮಕಾಲೀನರಲ್ಲಿ ಯಾರೂ ಮೀರಿಸಲು ಸಾಧ್ಯವಾಗದಷ್ಟು ಎತ್ತರಕ್ಕೆ ಇಮಾಮರು ಜ್ಞಾನ ಮತ್ತು ಬದುಕಿನಲ್ಲಿ ಬೆಳೆದು ನಿಂತಿದ್ದರು. ಇಮಾಮ್ ನವವಿ ಹೇಳುತ್ತಾರೆ: ಪ್ರಸಿದ್ಧ ವಿದ್ವಾಂಸರಾದ ಇಮಾಂ ರಾಫೀಈ ರವರು ಅನೇಕ ಕರಾ ಮತ್ ಒಡೆಯರಾಗಿದ್ದಾರೆ. ಇನ್ನು ಸ್ವಲಾಹ್ ಹೇಳುತ್ತಾರೆ: 'ಇಮಾಂ ರಾಫೀಈರಂತೆ ಅರಬಿಯೇತರ ದೇಶದಲ್ಲಿ ನಾನು ಮತ್ತೊಬ್ಬರನ್ನು ಕಂಡಿಲ್ಲ. ಜ್ಞಾನ ಲೋಕದಲ್ಲಿ ಮಹಾ ವಿಸ್ಮಯವಾಗಿ ವಿರಾಜಿಸಿ, ಆತ್ಮೀಯಾನು ಭೂತಿಯಲ್ಲಿ ಬೆಳೆದು ನಿಂತ ಇಮಾಮ ರಲ್ಲಿ ಮಹತ್ತರವಾದ ಪವಾಡಗಳು ಪ್ರಕಟವಾಗುತ್ತಿತ್ತೆಂದು ಇಮಾಂ ನವವಿ ಹೇಳಿರುವುದನ್ನು ಕಾಣಬಹುದು.ಶಿಷ್ಯಪ್ರಪಂಚ ಕಠಿಣಪರಿಶ್ರಮದ ಮೂಲಕ ಜ್ಞಾನ ಲೋಕದ ಅನೇಕ ಮೆಟ್ಟಿಲು ಏರಿದ ಮಹಾಕ್ರಾಂತಿ ಪುರುಷರಾಗಿದ್ದಾರೆ ಇಮಾಂ ರಾಫೀಈ ಮಿ. ತಫೀರ್, ಹದೀಸ್, ಕರ್ಮಶಾಸ್ತ್ರ ಇತ್ಯಾದಿ ಜ್ಞಾನದ ಎಲ್ಲಾ ಶಾಖೆಗಳಲ್ಲಿ ಪಳಗಿದ ಇಮಾಮರು ವಿಶೇಷವಾಗಿ ಖಸ್ಟೀನ್‌ನಲ್ಲಿ ದರ್ಸ್ ನಡೆಸಿದರು. ವಿವಿಧ ದೇಶಗಳಿಂದ ಜ್ಞಾನದಾಹಿಗಳಾದ ಅನ್ವೇಷಕರು (ವಿದ್ಯಾರ್ಥಿಗಳು) ಅವರ ಬಳಿಗೆ ಬಂದು ಜ್ಞಾನದ ಮಧುವನ್ನು ಹೀರುತ್ತಿದ್ದರು. ನಂತರದ ಕಾಲದಲ್ಲಿ ಜಗತ್ತಿನ ಪಥ = ಬದಲಾಯಿಸಿದ ಅನೇಕ ಮಹಾನುಭಾವರಲ್ಲಿ ಕೆಲವರು ಅವರ ಶಿಷ್ಯರಾಗಿದ್ದರು. ಪುತ್ರ ಅಬ್ದುಲ್ ಕರೀಮ್ ಅಝೀಝು ದೀನ್ ಫ್ರ ಹಾಫಿಲ್ ಸಕಿಯುದ್ದೀನ್ ಅಲ್-ಮುಂದಿರಿ 4, ಮಹಮ್ಮದ್ బినా అది సఈదోపు, అబులా ಫತಾಹುಲ್ ಖೈಸಿ ಅಬ್ಬಿಲ್ ಹಾದಿ ಇಬ್ಬು ಸುಕ್ರಿ ಫಕ್ರುದ್ದೀನ್ ಬಿನ್ ಅಬ್ದುಲ್ మిబి అదో బాలిద ఇతరరు. ಇಮಾಮರ ಪ್ರಮುಖ ಶಿಷ್ಯಂದಿರಲ್ಲಿ ಪ್ರಮುಖರು.
ಸ್ವಭಾವ ಮಹಿಮೆ, ಆರಾಧನೆ;
ಆರಾಧನೆಯ ಮಾಧುರ್ಯವನ್ನು ತಿಳಿದು,ಸವಿದು ಅದರಲ್ಲೇ ಮಗ್ನರಾಗಿದ್ದ ವಿನಯಾವಂತ ವಿದ್ವಾಂಸರಾಗಿದ್ದರು ಇಮಾಂ ರಾಫೀಈ 4. ತಲ್ವಾ, ಸೂಕ್ಷ್ಮತೆ,ಆರಾಧನೆ, ಐಹಿಕ ವಿರಕ್ತಿಯನ್ನು ಇಮಾಮರು ಮೈಗೂಡಿಸಿಕೊಂಡಿದ್ದರು.
ಇಮಾಂ ಸುಬುಖ ಹೇಳಿದರು: 'ಅತೀ ಸೂಕ್ಷ್ಮ ಜೀವನದ ಮೂಲಕ, ಅವರ ಬದುಕು ಖಾಸಗಿ ಮತ್ತು ಬಹಿರಂಗ ಎಂಬ ವ್ಯತ್ಯಾಸವಿಲ್ಲದೆ ಸ್ಪಟಿಕವಾಗಿತ್ತು.
ಅನೇಕ ಕರಾಮತುಗಳನ್ನು ಬದುಕಿರು ವಾಗಲೇ ಮಾಡಿ ತೋರಿಸಿದ ಇಮಾಮ ರು ಅಲ್ಲಾಹನೊಂದಿಗಿನ ಪ್ರೀತಿ, ವಿಶ್ವಾಸ ವನ್ನು ಕರಗತ ಮಾಡಿದ ಇಮಾಂ ಐಹಿಕಲೋಕದ ಯಾವುದೇ ಮೌಲ್ಯ, ಮೋಹಗಳಿಗೆ ಎಂದೂ ಬಲಿಯಾಗಲಿಲ್ಲ. ಪರಲೋಕದಲ್ಲಿನ ಶಾಶ್ವತ ವಿಜಯಕ್ಕಾಗಿ ಅಗತ್ಯಗಳನ್ನು ಪಡೆದುಕೊಂಡರೂ ಅವರು ಈ ಜಗತ್ತಿನ ಇತಿಮಿತಿಯನ್ನು ಮೀರಲಿಲ್ಲ.ಇಬ್ಬುಲ್ ಮುಲ್ಕಿನ್ ಟಮಿ ಹೇಳುತ್ತಾರೆ: 'ಇಮಾಮ್ ರಾಫೀಈ, ಜಗಪ್ರಸಿದ್ಧ ಗ್ರಂಥವಾದ 'ಶರಹ್ ಸ್ವಗೀರ್' ರಚಿಸಲಿರುವ ಕಾರಣಗಳಲ್ಲೊಂದು ಹೀಗಿದೆ.
ಒರ್ವ ವಿದ್ವಾಂಸರು ಶರಹ್ ಕಬೀರನ್ನು ಸಂಕ್ಷಿಪ್ತಗೊಳಿಸಲೆಂದು ಅಭಿಪ್ರಾಯ ಬೇಡಿಕೊಂಡರು. ಅದಕ್ಕಾಗಿ ಅವರು ತಯಾರಿಯನ್ನೂ ನಡೆಸುತ್ತಿದ್ದರು. ಈ ವಿವರ ತಿಳಿದ ಇಮಾಮ್ ರಾಫೀಈ ಸ್ತೆರಷ್ಟು ನೈಪುಣ್ಯತೆ ಹೊಂದಿರದ ಅವರು ಶರಹುಲ್ ಕಬೀರ್‌ನ ಆಶಯದಲ್ಲಿ ಸೋರಿಕೆ ಸಂಭವಿಸಬಹುದೆಂದು ಭಯಪಟ್ಟು ಆ ವ್ಯಕ್ತಿಯೊಡನೆ ಹೇಳಿದರು: 'ನಾನೇ ಅದನ್ನು ನಿರ್ವಹಿಸುತ್ತೇನೆ. ಆದರೆ ಬರೆಯಲು ಅವಶ್ಯವಿರುವಷ್ಟು ಕಾಗದ ಖರೀದಿಸಲು ನನ್ನ ಬಳಿ ಹಣವಿಲ್ಲ.' ಅವರೂ ಬಡವರಾಗಿದ್ದರು. ಕಾಗದವನ್ನು ಒಟ್ಟುಸೇರಿಸಲು ಪ್ರಯತ್ನಿಸಿದಾಗ ಅವರಿಗೆ, ಮಾರಾಟಗಾರರು ತಮ್ಮ ಸರಕುಗಳನ್ನು ಸುತ್ತುವ ಅಕ್ಷರಗಳಿಂದ ತುಂಬಿದ ಕಾಗದ ಗಳು ಮಾತ್ರ ದೊರೆಯಿತು. ಬೇರೆ ಮಾರ್ಗ ಕಾಣದಿದ್ದಾಗ ಖಾಲಿ ಜಾಗದ ಲ್ಲೂ, ಮಾರ್ಜಿನ (ಅಂಚ) ಭಾಗದಲ್ಲಿ * ಶರಹು ಸ್ವಗೀರ್ ಬರೆದು ಇಮಾಮರು ಪೂರ್ಣಗೊಳಿಸಿದರು.ನಂತರ ಅದನ್ನು ಬೇರೆ ಹಾಳೆಗೆ ಬರೆಯಲಾಯಿತು. ಪೂರ್ವಿಕ ವಿದ್ವಾಂಸ ರಲ್ಲಿ ಹೆಚ್ಚಿನವರು ಪೇಪರ್‌ಗಳನ್ನು ಖರೀದಿಸಲು ಹಣವಿಲ್ಲದ ಬಡವರಾಗಿ ದ್ದರು. ಅವರುಗಳೆಲ್ಲರೂ ಭೌತಿಕಲೋಕದ ಲಾಭಕ್ಕಿಂತ ಪರಲೋಕ ಮತ್ತು ಉಪಕಾ ರದ ಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಿದರು. ಇಮಾಂ ಸುಬುಖಿ ತನ್ನ ತ್ವಬಕಾತ್ ನಲ್ಲಿನ ಮಹಾತ್ಮರ ಕುರಿತು ಒಂದು ಘಟನೆಯನ್ನು ವಿವರಿಸುತ್ತಾರೆ; ಮಂತ್ರಿ ಯಾದ ಜಲಾಲುದ್ದೀನ್ ಖವರಸ್ಟ್ ಷಾ ಒಮ್ಮೆ ಆ ಪ್ರದೇಶವನ್ನು ನಾಶಮಾಡಲು ಬಂದ ಆಕ್ರಮಣಕಾರರನ್ನು ತನ್ನವರ ಭೀಮ ಬಲದಿಂದ ಸೋಲಿಸಿದರು. ಸುಲ್ತಾನರು ಕೂಡ ಯುದ್ಧದಲ್ಲಿ ಭಾಗವಹಿಸಿದರು.
ತನ್ನ ಕೈಗಳಿಂದ ಹಲವರು ಶತ್ರುಪಡೆಗಳನ್ನು ಕೊಂದು ಹಾಕಿದರು. ನಾಡಿನ ಉದ್ಧಾರಕ್ಕಾಗಿ ಎಲ್ಲವನ್ನೂ ಮರೆತು ಹೋರಾಡಿದ ಸುಲ್ತಾನರು ಖಝೀನ್ ಮೂಲಕ ಪ್ರಯಾಣಿಸುತ್ತಿದ್ದಾಗಿ ಇಮಾಮಿಗೆ ಕಾಣಿಸಿಕೊಂಡರು. ಸುಲ್ತಾನ ಶೌರ್ಯಕ್ಕೆ ಮಣಿದು ಗೌರವ, ಮೆಚ್ಚುಗೆಯ ಸಂಕೇತವಾಗಿ ಅವರ ಕೈಯನ್ನು ಚುಂಬಿಸಲು ಇಮಾಮರು ಮುಂದಾದರು. ಇಮಾಮ್ ಹಿಂತಿರುಗುವ ವೇಳೆ, ಸುಲ್ತಾನನು ಮುತ್ತಿಕ್ಕಿದ ಕೈ ವಾಹನದಿಂದ ನೋವಾದಾಗ ಅವರು ವಿನಯದಿಂದ ಹೇಳಿದರು: 'ಸುಲ್ತಾನನು ನನ್ನ ಕೈಗೆ ಮುತ್ತಿಟ್ಟಾಗ ನಾನು ಕೆಟ್ಟವನಲ್ಲ ಎಂಬ ಕಲ್ಪನೆ ನನ್ನ ಮನಸ್ಸಿನಲ್ಲಿ ಮೂಡಿಸಿದ್ದಕ್ಕಾಗಿದೆ ಈ ನೋವು ನನಗೆ ಶಿಕ್ಷೆಯಾಗಿ ದೊರೆತದ್ದು. ಬರವಣಿಗೆ ರಾಫಿಈ ಊರಿಗೆ ಬರವಣಿಗೆ ಯ ಲೋಕದಲ್ಲಿ ಉನ್ನತ ಸ್ಥಾನವಿದೆ. ಪ್ರಮುಖ ಶಾಫೀಈ ಕರ್ಮಶಾಸ್ತ್ರ ವಿದ್ವಾಂಸರಾದ ಇಮಾಂ ರಾಫಿಈ ರವರು ರಚಿಸಿದ 'ಅಲ್ ಮುಹರರ್' ಎಂಬ ಗ್ರಂಥವಾಗಿದೆ ಇಮಾಮ್ ನವವಿ ಅವರ "ಮಿನ್ಹಾಜ್” ಆಧರಿಸಿದ್ದು. ಇನ್ನೂ ಅನೇಕ ಗ್ರಂಥಗಳನ್ನು ಜ್ಞಾನಲೋಕಕ್ಕೆ ಅರ್ಪಿಸಲು ಇಮಾಮರಿಂದ ಸಾಧ್ಯವಾಗಿದೆ.
ಹದೀಸ್‌ನ ಐದು ಸಂಪುಟಗಳ ಕೃತಿಯಾಗಿದೆ 'ಅಮಾಲಿಕ್ಸರಿಹಾ ಅಲಾ ಮುಪ್ರದಾತಿಲ್ ಫಾತಿಹಾ' ಅಲ್- ಇಜಾಝ್ ಫೀ ಅಬ್ದಾರಿಲ್ ಹಿಜಾಝ್, ಅದ್ದಾತೀನ್ ಫೀ ಅಬ್ಬಾರಿ ಖಸ್ಟೀನ್ ಮೊದಲಾದವುಗಳು ಇಮಾಮರ ಗಮನಾರ್ಹ ಕೃತಿಗಳಾಗಿವೆ. ಅತ್ತಬ್ಬಿನ್ ಮಿನ್ ಮುತಾಅಲ್ಲಖಾತಿಲ್ ವಜಿಸ್, ರೌಳ, ಸವಾದುಲ್ ಐನಾನಿ ಫಿ
ಫತುಹುಲ್ ಅಝೀಝ್ ಶರ್ಹುಲ್ ವಜಿಝ್ (20 ಸಂಪುಟ) ಅಲ್ ಮುಹರರ್ ಮೊದಲಾದವು ಕರ್ಮ ಶಾಸ್ತ್ರದ ಪ್ರಮುಖ ಗ್ರಂಥಗಳು. ಇಬ್ ಸಲಾಹ್ ರವರು 12 ಸಂಪುಟಗಳಾಗಿ ವಜಿಸ್‌ಗೆ ವಿವರಣೆಯನ್ನು ಬರೆದಿದ್ದಾರೆ. ಅಬು ಅಬ್ದುಲ್ಲಾ ಮಹಮ್ಮದ್ ಬಿನ್ ಮಹಮ್ಮದ್ ಅಲ್-ಇಸ್ಪಿರಾಈನಿ, ಹೇಳುತ್ತಾರೆ: ನಮ್ಮ ಗುರುಗಳಾದ ರಾಫೀಈಮಿ ದೀನಿನ ಇಮಾಂ, ನೈಜವಾದ ಸುನ್ನತಿನ ಹಿಂಬಾಲಕರೂ ಆಗಿದ್ದಾರೆ. ಕರ್ಮ ಶಾಸ್ತ್ರದಂತ ಜ್ಞಾನದ ಎಲ್ಲಾ ಶಾಖೆಗಳಲ್ಲಿ ಪರಿಣತಿಯನ್ನು ಗಿಟ್ಟಿಸಿಕೊಂಡ ಮಹಾನರು ಆ ಕಾಲದ ಮದ್ದಬ್‌ನ ಮುಪ್ತಹಿದ್ (ಸಂಶೋಧಕರು)ಜತೆಗೆ, ತಪ್ಪಿರ್‌ನಲ್ಲಿ ಆಳವಾದ ಅರಿವನ್ನೂ ಕರಗತ ಮಾಡಿಕೊಂಡಿದ್ದರು. ಇಮಾಂ ಶಾಫಿಈ ಅವರ ಮುನ್ನದಿಗೆ ಮಹಾತ್ಮರು ಶರಹ್ ಬರೆಯುತ್ತಿದ್ದರು. ಸಾಹಿತ್ಯ ಕ್ಷೇತ್ರಕ್ಕೂ ಇಮಾಮರು ಅಪಾರ ಕೊಡುಗೆ ನೀಡಿದ್ದಾರೆ. ಸಾಹಿತ್ಯಕ ಮತ್ತು ವಿಚಾರಗಳಿಂದ ಸಮೃದ್ಧವಾಗಿರುವ ಅನೇಕ ಕವಿತೆಗಳನ್ನು ಇಮಾಂ ರಚಿಸಿದ್ದಾರೆ. ಇಬ್ ಹಜರುಲ್ ಅಸ್ಟಲಾನಿ ಹೇಳುತ್ತಾರೆ: ನನ್ನ ಗುರುಗಳಾದ ಶೇಖ್ ಸಲಾಹುದ್ದೀನ್ ಹೇಳಿದರು; ಡಮಾಸ್ಕಸ್‌ನಲ್ಲಿ ಒಮ್ಮೆ ಇಮಾಮ್ ಸುಬುಖಿ ಅವರ ಬಳಿಗೆ ಅರಬೇತರ ಮಹಿಳೆಯೊಬ್ಬರು ಬಂದರು. ಮಹಾಸಾಹಿತಿ, ಲೇಖಕಿ ವಿದ್ವಾಂಸೆಯಾದ ಅವರು ರಾಫಿಈ ಅವರ ಸಂತಾನ ಪರಂಪರೆಯಲ್ಲಿ ಸೇರಿದವರಾಗಿದ್ದಾರೆ. ವಿಶ್ವಾಸಶಾಸ್ತ್ರದಲ್ಲಿ ಅವರು ಬರೆದ ಗ್ರಂಥವನ್ನು ಓದಿದೆ.ಅಹ್ಲುಸ್ಸುನ್ನದ ವಿಶ್ವಾಸ ತಳಹದಿಯಲ್ಲಿ ಉನ್ನತ ಸಾಹಿತ್ಯಕ ಮೌಲ್ಯದೊಂದಿಗೆ ದೃಢವಾಗಿ ಅದರಲ್ಲಿ ಸಮರ್ಥಿಸಿದ್ದಾರೆ. ರಾಫೀಈ ಭೈರವರ ಅದೇ ಶೈಲಿಯನ್ನೇ ಅವರೂ ಬರವಣಿಗೆಯಲ್ಲಿ ಅನುಸರಿಸಿದರು.
ಕರ್ಮಶಾಸ್ತ್ರದಲ್ಲಿ ಶೈಖಾನಿ
ಶಾಫೀಈ ಕರ್ಮಶಾಸ್ತ್ರದ ಪ್ರಯಾಣದಲ್ಲಿ ಬಹಳ ಮುಖ್ಯವಾದ ಅವಧಿಯಾಗಿದೆ ಇಮಾಮ್ ರಾಫೀಈು ಮತ್ತು ಇಮಾಮ್ ನವವಿ ಹಿಜರಿ ಏಳನೇ ಶತಮಾನ. ಅವರು ಸಕ್ರಿಯರಾದ ಶಾಫೀಈ ಕರ್ಮಶಾಸ್ತ್ರದಲ್ಲಿ ಅನೇಕ ಪ್ರಖ್ಯಾತ ವಿದ್ವಾಂಸರು ಇದ್ದರೂ ಇಮಾಂ ರಾಫೀಈ, ನವವಿ ರವರ ಪಾಂಡಿತ್ಯಪೂರ್ಣ ತೀರ್ಪುಗಳಿಗೆ (ಫತ್ವ)ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಶೈಖಾನಿ ಎಂದೇ ಇಂದಿಗೂ ಕರ್ಮ ಶಾಸ್ತ್ರ ಗ್ರಂಥಗಳಲ್ಲಿ ಕರೆಯಲ್ಪಡುವ ಈ ಮಹಾನ್ ವಿದ್ವಾಂಸರು ಕರ್ಮಶಾಸ್ತ್ರದಲ್ಲಿನ ಸಮಸ್ಯೆಗಳಿಗೆ ಇಂದಿಗೂ ಪರಿಹಾರವಾಗಿದ್ದಾರೆ.
ಇಮಾಂ ಗಝಾಲಿ 4 ಅವರು ಮಾಡಿದ (ಆರಂಭಿಸಿದ) ಕರ್ಮ ಶಾಸ್ತ್ರದ ಬೆಳವಣಿಗೆ ಗಳ ಹಂತಗಳನ್ನು ಅನುಸರಿಸಿ ಇಮಾಮ್ ರಾಫೀಈ 4 ಕೂಡ ರಂಗ ಪ್ರವೇಶಿಸಿದರು. ಶಾಫೀಈ ಕರ್ಮಶಾಸ್ತ್ರದಲ್ಲಿ ಉತ್ತಮ ಜ್ಞಾನವನ್ನು ಹೊಂದಿದ್ದರೂ ತಫೀರ್, ಹದೀಸನ್ನು ಸೂಕ್ಷ್ಮವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರು ಇಮಾಂ ರಾಫೀಈ ಮ. ತನ್ನ ಸ್ಥಳೀಯ ಊರಾದ ಖಸ್ಟೀನ್‌ಲ್ಲಿ, ತಫೀರ್ ಹದೀಸ್ ಬೋಧನೆಗಾಗಿ ವಿಶೇಷ ತರಗತಿ ಆಯೋಜಿಸಲಾಗಿತ್ತು. ಅರಬಿಯೇತರ ಪ್ರದೇಶದಲ್ಲಿ ಜನಿಸಿದರೂ, ಇಮಾಮರು ಅರೇಬಿಕ್ ಭಾಷೆ ಮತ್ತು ಸಾಹಿತ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದರು.
ಮರಣ
ಹಿಜ್ರಾ 623ರ ದುಲ್ಬಅದ್ ತಿಂಗಳಿನಲ್ಲಿ, ತನ್ನ ಅರವತ್ತಾರನೆ ವಯಸ್ಸಿನಲ್ಲಿ ಖಸ್ವೀನಿಯಲ್ಲಿ ಆ ಮಹಾಜ್ಞಾನಿ ಇಹಲೋಕ ಯಾತ್ರೆ ಮುಗಿಸಿದರು. ಅವರನ್ನು ಅವರ ಜನ್ಮಸ್ಥಳವಾದ ಖಸ್ಟೀನ್‌ನಲ್ಲೆ ದಫನ್ ಮಾಡಲಾಯಿತು.
Comments
Post a Comment