ಔಲಿಯಾಗಳ ಕರಾಮತ್

   ಖುರ್‌ಆನ್ ಹೇಳಿದ ಔಲಿಯಾಗಳ ಕರಾಮತ್..

〰️〰️〰️〰️〰️〰️〰️〰️ 〰️〰️〰️〰️〰️〰️〰️〰️
▪️ಮಹಾತ್ಮರಾದ ಔಲಿಯಾಗಳ ಕರಾಮತ್ ಬಗ್ಗೆ ಮುಸ್ಲಿಂ ವಿದ್ವಾಂಸರು ಏನಾದರೂ ಹೇಳಿದರೆ,
ಅದನ್ನು ಅವಹೇಳಿಸುವ, ಡಿಂಗನ ಕಥೆಗಳೆಂದು ಹಿಯಾಳಿಸುವ ನೂತನವಾದಿಗಳನ್ನು ನೀವು ಕಾಣಬಹುದು.
ಇದಕ್ಕೆ ಕಾರಣ..
ಮಹಾತ್ಮರೊಂದಿಗೆ ಅವರಿಗಿರುವ ಅಲರ್ಜಿ..
ಕರಾಮತ್‌ನೊಂದಿಗೆ ಅವರಿಗಿರುವ ಅಸಡ್ಡೆ..

▪️ಥೇಟ್ ಮುನಾಫಿಕ್‌ಗಳಂತೆ.
ಪ್ರವಾದಿ ﷺ ಏನಾದರೂ ಅದ್ಭುತ ತೋರಿಸಿದರೆ ಕೂಡಲೇ ಮುನಾಫಿಕ್‌ಗಳು ಕಾಫಿರರೊಂದಿಗೆ ಸೇರಿ ತಮಾಷೆ ಮಾಡುತ್ತಿದ್ದರು.

▪️   ಖುರ್‌ಆನ್ ನಲ್ಲಿರುವ ಕರಾಮತ್‌ಗಳು ಡಿಂಗನ ಕಥೆಗಳೇ ?
ಕರಾಮತ್ತನ್ನು ಡಿಂಗನ ಕಥೆಗಳೆಂದು ಅವಹೇಳಿಸುವ ಸಲಫಿಗಳೇ  
ಖುರ್‌ಆನ್ ನಲ್ಲಿರುವ ಅತ್ಯಧ್ಬುತಕರವಾದ ಕರಾಮತ್‌ಗಳ ಬಗ್ಗೆ ಏನು ಹೇಳುತ್ತೀರಿ ?
ಅದನ್ನು ಅಂಗೀಕರಿಸುತ್ತೀರಾ ? ಇಲ್ಲವಾ ?

▪️ ಖುರ್‌ಆನ್ ಹೇಳಿದ ಕರಾಮತ್‌ಗಳು.

🔸 ಪ್ರವಾದಿ ಈಸಾ ( ಅ ) ಕಲಸು ಮಣ್ಣಿನಿಂದ ಪಕ್ಷಿಯ ರೂಪ ಮಾಡಿ, ಅದಕ್ಕೆ ಊದಿದಾಗ ಅದು ಜೀವಂತ ಪಕ್ಷಿಯಾಗಿ ಹಾರಿ ಹೋಯಿತು.

🔸 ಪ್ರವಾದಿ ಈಸಾ ( ಅ ) ಜನ್ಮತಃ ಕುರುಡರನ್ನೂ, ಪಾಂಡು ರೋಗಿಗಳನ್ನು ಗುಣ ಪಡಿಸುತ್ತಿದ್ದರು.
ಜನರು ತಿಂದದ್ದನ್ನು, ಮನೆಯಲ್ಲಿ ಸಂಗ್ರಹಿಸಿದ್ದನ್ನು ಹೇಳುತ್ತಿದ್ದರು.
ಮರಣ ಹೊಂದಿದವರನ್ನು ಜೀವಂತಗೊಳಿಸುತ್ತಿದ್ದರು.
( ಸೂರಾ ಅಲ್ ಇಮ್ರಾನ್ 49 )

🔸 ಪ್ರವಾದಿ ಈಸಾ ( ಅ ) ಶಿಶುವಾಗಿದ್ದಾಗಲೇ ಮಾತನಾಡಿದ್ದರು.

🔸 ಏಳು ಮಂದಿ ಮಹಾತ್ಮರು ಗುಹೆಯಲ್ಲಿ ಸುಧೀರ್ಘ 308 ವರ್ಷಗಳ ಕಾಲ ನಿದ್ರಿಸಿದ್ದರು.
ನಂತರ ಅಲ್ಲಾಹು ಅವರನ್ನು ಎಬ್ಬಿಸಿದನು.
( ಸೂರಾ ಅಲ್ ಕಹ್ಫ್ )

🔸ಸಾವಿರಾರು ಕೀ.ಮೀ ದೂರದಲ್ಲಿದ್ದ ಬಲ್ಕೀಸ್ ರಾಣಿಯ ಮಯೂರಾ ಸಿಂಹಾಸನವನ್ನು ಕ್ಷಣಾರ್ಧದಲ್ಲಿ  ಮಹಾತ್ಮರಾದ ಆಸಫ್ ಬಿನ್ ಬರ್ಖಿಯಾ ( ರ ) ರವರು ಸುಲೈಮಾನ್ ನಬಿ ( ಅ ) ರ ಮುಂದೆ ಹಾಜರು ಪಡಿಸಿದರು.
( ಸೂರಾ ಅನ್ನಮ್ಲ್ 40 ) 

🔸 ಮಹಾತ್ಮರಾದ  ಖಿಲ್‌ರ್ ( ರ ) ರವರ ಅಧ್ಬುತ ಕರಾಮತ್‌ಗಳನ್ನು ಸೂರಾ ಅಲ್ ಕಹ್ಫ್ ಸ್ಪಷ್ಟವಾಗಿ ವಿವರಿಸಿದೆ.
ಹಡಗಿಗೆ ತೂತು ಮಾಡಿ ಹಡಗನ್ನು ರಕ್ಷಣೆ ಮಾಡಿದ್ದರು.
ಬೀಳುತ್ತಿದ್ದ ಗೋಡೆಯನ್ನು ಸರಿ ಮಾಡಿ, ಅದರೊಳಗಿದ್ದ ನಿಧಿಯನ್ನು ಅನಾಥರಿಗೆ ಸಿಗುವಂತೆ ಮಾಡಿದ್ದರು.
ಪಥ ಭ್ರಷ್ಟನಾದ ಮಗನ ಬದಲಿಗೆ ಒಳ್ಳೆಯ ಮಗು ಸಿಗುವಂತೆ ಮಾಡಿದ್ದರು.

🔸 ಪ್ರವಾದಿ ಮೂಸಾ ( ಅ )ಬೆತ್ತದಿಂದ ನೈಲ್ ನದಿಗೆ ಬಡಿದಾಗ ,
ನೈಲ್ ನದಿ ಎರಡು ಭಾಗವಾಯಿತು. 
ಮೂಸಾ ( ಅ ) ರವರ ಅನುಯಾಯಿಗಳು ಅದರ ಮೂಲಕ ‌ಹಾದು ಹೋದರು.

🔸 ಪ್ರವಾದಿ ಮೂಸಾ ( ಅ ) ಕೈಯಲ್ಲಿದ್ದ ಬೆತ್ತ ನೆಲಕ್ಕೆ ಹಾಕಿದಾಗ ಅದು ಹಾವಾಗುತ್ತಿತ್ತು.
ಬೆತ್ತದಿಂದ ಬಂಡೆಕಲ್ಲಿಗೆ ಹೊಡೆದಾಗ, ಅದರಿಂದ ನೀರಿನ ಒರತೆಗಳು ಉಂಟಾಯಿತು.

🔸ಒಣಗಿದ ಖರ್ಜೂರ ಮರವನ್ನು
ಗರ್ಭಿಣಿಯಾಗಿದ್ದ ಮರ್ಯಮ್ ( ರ ) ಮೆಲ್ಲನೇ ಅಲುಗಾಡಿಸಿದಾಗ , ಸಿಹಿಯಾದ ಖರ್ಜೂರದ ಹಣ್ಣುಗಳು ಉದುರಿ ಬಿದ್ದವು. 
( ಸೂರಾ ಮರ್ಯಮ್ , 25 )

🔸ಬೀವಿ ಮರ್ಯಮ್ ( ರ )
 ಪುರುಷ ಸಂಪರ್ಕವಿಲ್ಲದೆ ಪ್ರವಾದಿ ಈಸಾ ( ಅ ) ರನ್ನು ಹೆತ್ತಿದ್ದರು.

🔸ಸ್ವಾಲಿಹ್ ನಬಿ ( ಅ ) ಬಂಡೆಕಲ್ಲಿನಿಂದ ಜೀವಂತ ಒಂಟೆಯನ್ನು ಹೊರ ತೆಗೆದಿದ್ದರು.

🔸ಯೂಸುಫ್ ನಬಿ ( ಅ ) ಕನಸಿಗೆ ಅತ್ಯದ್ಭುತ ವಾದ ವ್ಯಾಖ್ಯಾನ ನೀಡುತ್ತಿದ್ದರು.

🔸ಪ್ರವಾದಿ ಝಕರಿಯ್ಯಾ ( ಅ ) ರವರು ಮಿಹ್‍ರಾಬ್‍ನಲ್ಲಿರುವ ಮರ್ಯಮ್ ( ರ ) ರವರ ಬಳಿ ಪ್ರವೇಶಿಸಿದಾಗಲೆಲ್ಲ ಏನಾದರೊಂದು ಭಕ್ಷ್ಯವನ್ನು ಅವರ ಬಳಿ ಕಾಣುತ್ತಿದ್ದರು. ಝಕರೀಯಾ ( ಅ ) ಕೇಳಿದರು, "ಮರ್ಯಮಳೇ! ಇದು ನಿನಗೆ ಎಲ್ಲಿಂದ ಸಿಗುತ್ತದೆ’
ಅವರು ಹೇಳಿದರು; 
*‘ಇದು ಅಲ್ಲಾಹನ ಕಡೆಯಿಂದ ಸಿಕ್ಕಿದೆ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಆಹಾರವನ್ನು ಯಾವುದೇ ಲೆಕ್ಕವಿಲ್ಲದೆ ನೀಡುವನು’
( ಸೂರಾ ಅಲ್ ಇಮ್ರಾನ್ 37 ) 

🔸ಪ್ರವಾದಿ ಸುಲೈಮಾನ್ ( ಅ ) ರಿಗೆ ಜಿನ್ನ್‌ಗಳು, ಶೈತಾನ್‌ಗಳು ಅಧೀನವಾಗಿದ್ದವು.
ಮಾತ್ರವಲ್ಲ ಅವರೊಂದಿಗೆ ಪಕ್ಷಿಗಳು ಇರುವೆಯು ಕೂಡ ಮಾತನಾಡಿತು.
( ಸೂರಾ ಅನ್ನಮ್ಲ್ )

🔸ಹ. ಇಬ್ರಾಹೀಂ ( ಅ ) ರನ್ನು ಬೆಂಕಿಗೆ ಹಾಕಿದಾಗ, ಬೆಂಕಿ ಅವರನ್ನು ದಹಿಸಲಿಲ್ಲ.
ಮಗನನ್ನು ದ್ಸಬಹ್ ಮಾಡಲು ಮುಂದಾದಾಗ ಕತ್ತಿ ಕತ್ತು ಕೊಯ್ಯಲಿಲ್ಲ.

🔸ಯೂನುಸ್ ನಬಿ ( ಅ ) ರನ್ನು ಮೀನು ನುಂಗಿತು. ಕೆಲವು ದಿನಗಳ ನಂತರ ಹೊರಗೆ ಹಾಕಿತು.

🔸ಪ್ರವಾದಿ ಪೈಗಂಬರ್ ﷺ ರವರು
ಕೈ ಬೆರಳುಗಳ ಮಧ್ಯೆ ನೀರು ಹರಿಸಿದ್ದರು.
ಕೈ ಬೆರಳಿನ ಸೂಚನೆ ಮೂಲಕ ಚಂದ್ರನನ್ನು ಇಬ್ಬಾಗ ಮಾಡಿದ್ದರು.
ಕಲ್ಲು, ಮರ, ಪ್ರಾಣಿಗಳು ಅವರ ಜೊತೆ ಮಾತನಾಡಿದ್ದವು.
 
▪️ಹೀಗೆ ಮಹಾತ್ಮರ ನೂರಾರು‌ ಮಹಾಧ್ಭುತಗಳನ್ನು ಖುರ್‌ಆನ್ ಮುಲಾಜಿಲ್ಲದೆ ವಿವರಿಸಿದೆ.

ಅಲ್ಲಾಹನಿಗೆ ಈ ಮುಅ್‌ಜಿಝತ್, ಕರಾಮತ್ ಹೇಳುವಾಗ ಮುಜುಗರವಾಗಲಿಲ್ಲ.
ಜನರು ಏನು ಭಾವಿಸಬಹುದೆಂದು ನೋಡಲೂ ಇಲ್ಲ.
ಇದ್ದದ್ದನ್ನು ಇದ್ದ ಹಾಗೆಯೇ ಹೇಳಿದ.
ವಿಚಿತ್ರವೆಂದರೆ ಅಲ್ಲಾಹನಿಗೆ ಅಸಹ್ಯವಾಗಿ ಕಾಣದ್ದು ಸಲಫಿಗಳಿಗೆ ಅಸಹ್ಯವಾಗಿ ಕಾಣ ತೊಡಗಿದೆ.

ಜನರು ಏನು ಭಾವಿಸುತ್ತಾರೋ, ಪ್ರಗತಿಪರರು, ಬುದ್ದಿವಂತರು ಏನು ತಿಳಿದು ಕೊಳ್ಳುತ್ತಾರೋ ಎಂದು ಅಲ್ಲಾಹು ನೋಡಲಿಲ್ಲ.
ಇದ್ದದ್ದನ್ನು ಇದ್ದ ಹಾಗೆ ಅಲ್ಲಾಹು ವಿವರಿಸಿದ.
ಅಲ್ಲಾಹನ ಖುದ್‌ರತ್, ಶಕ್ತಿ, ಸಾಮಾರ್ಥ್ಯ ವನ್ನು ಜಗತ್ತಿಗೆ ತಿಳಿಸಿ ಕೊಡುವುದಾಗಿತ್ತು ಅಲ್ಲಾಹನ ಉದ್ದೇಶ.

▪️ಒಂದು ವೇಳೆ ಮರಣ ಹೊಂದಿದವರನ್ನು ಜೀವಂತ ಮಾಡಿದ್ದು, ನೈಲ್ ನದಿ ಎರಡು ಬಾಗವಾದದ್ದು, ಪಕ್ಷಿಗಳು ಮಾತನಾಡಿದ್ದು ಮುಂತಾದ ಘಟನೆಗಳನ್ನು ಸುನ್ನೀ ವಿದ್ವಾಂಸರು ಹೇಳಿದ್ದರೆ ,
ಕೂಡಲೇ ಸಲಫಿಗಳು ಅದನ್ನು ಕಟ್ಟು ಕಥೆಗಳೆಂದು ಬಿಂಬಿಸುತ್ತಿದ್ದರು.

▪️ಸಲಫಿಗಳೇ ಈಗ ಹೇಳಿ..
ಅಲ್ಲಾಹನು ವಿವರಿಸಿದ ಈ ಕರಾಮತ್‌ಗಳು ಡಿಂಗನ ಕಥೆಗಳೇ..?

▪️ಮಹಾತ್ಮರ ಕರಾಮತ್‌ಗಳಿಗೆ ಪರಿಧಿಯಿಲ್ಲ.
ಕರಾಮತ್ ಅಂದರೆ ನಾವು ಊಹಿಸಿದ್ದು ಉಂಟಾಗುವುದಲ್ಲ.
ಅದಕ್ಕಿಂತಲೂ ಆಚೆ, ನಮ್ಮ ನಿರೀಕ್ಷೆಗಿಂತಲೂ ಮಿಗಿಲು.

▪️ಕೊನೆಯಲ್ಲಿ ಹೇಳಲಿಕ್ಕಿರುವುದು ಇಷ್ಟೇ.
ಆಲ್ಲಾಹನ ಔಲಿಯಾಗಳು ಅಲ್ಲಾಹನೊಂದಿಗೆ ವಿಶೇಷ ಸಂಪರ್ಕ ಹೊಂದಿದವರು. ಅಲ್ಲಾಹನಿಂದ ರಹಸ್ಯ ಜ್ಞಾನ (ಸಿರ್ರ್)ವನ್ನು ಅಲ್ಲಾಹನ ವಿಶೇಷ ಔದಾರ್ಯದಿಂದ ಪಡೆದವರು. 
ಆ ರಹಸ್ಯದ ಎದುರು ಯಾವ ಅಡೆತಡೆಗಳೂ ನಿಲ್ಲಲಾರವು. 

ಅಲ್ಲಾಹನೊಂದಿಗೆ ಸವಿಶೇಷ ಸಂಬಂಧ ಹೊಂದಿರುವ ಔಲಿಯಾಗಳ ಕೈಯಲ್ಲಿ ಅದ್ಭುತ ಘಟನೆಗಳನ್ನು ಕಾಣಬಹುದು. ಅವುಗಳ ರಹಸ್ಯ, ಕಾರಣಗಳನ್ನು ಕಂಡು ಹಿಡಿಯಲು ಇತರರಿಗೆ ಸಾಧ್ಯವಿಲ್ಲ. ಅವೆಲ್ಲ ಮನುಷ್ಯನ ಸಾಮಾನ್ಯ ಜೀವನ ಕ್ರಮಗಳಿಗೆ ಅತೀತವಾದುದು,

▪️ಅಲ್ಲಾಹನು ಏನು ಹೇಳಿದ್ದನೋ ಅದನ್ನೇ ನಾವು ಹೇಳುತ್ತಿದ್ದೇವೆ.
ಹಿಂದೆಯೂ ಹೇಳಿದ್ದೇವೆ.
ಈಗಲೂ ಹೇಳುತ್ತಿದ್ದೇವೆ.
ಮುಂದೆಯೂ ಹೇಳುತ್ತೇವೆ.
ಜನರನ್ನು ಮೆಚ್ಚಿಸಲು ಸತ್ಯ ಮುಚ್ಚಿ ಹೇಳುವ ಕಪಟತನ ನಮಗಿಲ್ಲ.

▪️ಕರಾಮತ್ ಹೇಳುವುದರಿಂದ ಮಹಾತ್ಮರು ದೇವರಾಗುವುದಿಲ್ಲ.
ಅಲ್ಲಾಹನು ನೀಡಿದ ಶಕ್ತಿಯಿಂದಲೇ ಅವರು ಇದನ್ನೆಲ್ಲಾ ಮಾಡುತ್ತಾರೆಂಬ ನಂಬಿಕೆ ಮುಸ್ಲಿಮರಿಗಿದೆ

▪️ಖುರ್‌ಆನ್ ನಲ್ಲಿ ಹೇಳಿದ ಈ ನಗ್ನ ಸತ್ಯಗಳನ್ನು ನೀವು ನಂಬುವುದಾದರೆ ನಂಬಿ..
ಇಲ್ಲದಿದ್ದರೆ ದೂರ ನಿಲ್ಲಿ.
ಮತ ನಾಸ್ತಿಕರಾಗಬೇಡಿ
ಇಸ್ಲಾಮಿನ ವಿರೋಧಿಗಳಾದ ಸಿಯೋನಿಸ್ಟ್ - ಫ್ಯಾಸಿಸ್ಟ್ - ನಾಸ್ತಿಕರನ್ನು ತೃಪ್ತಿ ಪಡಿಸಲು ಕರಾಮತ್ ನಿಷೇಧಿಸುವ ಅಗತ್ಯವಿದೆಯಾ ?
ಯಾರನ್ನೂ ಮೆಚ್ಚಿಸುವ ಬದಲು ಅಲ್ಲಾಹನನ್ನು ಮೆಚ್ಚಿಸಿದರೆ ಸಾಕಾಲ್ಲವೇ ?
ಏನಂತೀರಿ ?


➖➖➖➖➖➖➖➖ ➖➖➖➖➖➖➖

Comments

Popular posts from this blog

ಮೂಗುತಿ

ಖುರ್‌ಆನ್ ಹೇಳಿದ ಕರಾಮತ್

ಇಸ್ತಿಗಾಸ