ಪ್ರವಾದಿ ﷺ ಪ್ರೇಮಿ
ಅರವತ್ತು ವರುಷ ಪುಣ್ಯ ಮದೀನಕ್ಕೆ ಪ್ರೇಮ ಪ್ರಯಾಣ ಬೆಳೆಸಿದ ಪ್ರವಾದಿ ﷺ ಪ್ರೇಮಿಯ ಕಥೆಯಿದೆ...
〰️〰️〰️〰️〰️〰️〰️〰️〰️〰️〰️〰️〰️〰️〰️〰️
ತನ್ನ ಪ್ರೀತಿಯ ನಾಯಕರಾದ ಮುತ್ತು ಹಬೀಬ್ ﷺ ತಂಙಳರ ರೌಲಾ ಶರೀಫಿಗೆ ಹೋಗಿ ಸಲಾಂ ಹೇಳಲು ಬೇಕಾಗಿ ಆ ಪ್ರವಾದಿ ﷺ ಪ್ರೇಮಿಯುಮಕ್ಕಾದಿಂದ ಮದೀನಕ್ಕೆ ಹೋಗುತ್ತಾರೆ
ಆ ಪ್ರವಾದಿ ﷺ ಪ್ರೇಮಿಯು ರೌಲಾ ಶರೀಫ್ ತಲುಪಿ
ಸಲಾಂ ಹೇಳುತ್ತಾರೆ ಮತ್ತೆ ಹಿಂತಿರುಗುತ್ತಾರೆ ಮರುದಿವಸ
ಮತ್ತೆ ಬರುತ್ತಾರೆ, ಸಲಾಂ ಹೇಳುತ್ತಾರೆಹಿಂತಿರುಗುತ್ತಾರೆ
ಹೀಗೆ ಒಂದೆರಡು ದಿವಸವಲ್ಲ ಬರೋಬ್ಬರಿ ಅರವತ್ತು ವರುಷ ಆ ಪ್ರವಾದಿ ﷺ ಪ್ರೇಮಿಯು ಪುಣ್ಯ ಮದೀನಕ್ಕೆ ಪ್ರೇಮ ಪ್ರಯಾಣ ಬೆಳೆಸುತ್ತಾರೆ.ಹೀಗೆ ಒಂದು ದಿನ ಆ ಮಹಾನರಿಗೆ ಪುಣ್ಯ ರೌಲಾದ ಹತ್ತಿರ ಹೋಗಿ ಸಲಾಂ ಹೇಳಲು ಸಾಧ್ಯವಾಗುವುದಿಲ್ಲ.
ಹೀಗೆ ಆ ಮಹಾನರು ಪರಿಶುದ್ಧ ರೌಲಾದ ಹತ್ತಿರ ಇರುವಾಗ ಸಣ್ಣದೊಂದು ನಿದಿರೆಗೆ ಜಾರಿಬಿಟ್ಟರು ಆ ಸಣ್ಣ ನಿದಿರೆಯಲ್ಲಿ ಮಹಾನರು ಮುತ್ತು ಹಬೀಬರನ್ನು ﷺ ದರ್ಶಿಸುತ್ತಾರೆ.
ಓ ಇಬ್ನ್ ಸಾಬಿತ್ ಯಾಕೆ ಇವತ್ತು ನೀನು ನನ್ನನ್ನು ನೋಡಲು ಬಂದಿಲ್ಲ..?? ನಿನ್ನನ್ನು ಕಾಣದಿದ್ದಾಗ ನಾನಿಲ್ಲಿಗೆ ನಿನ್ನನ್ನು ನೋಡಲು ಬರಬೇಕಾಯಿತು.... ಇದಾಗಿದೆ ಮುತ್ತು ಹಬೀಬರು ﷺ ಮತ್ತು ಆಶಿಕೀಗಳ ನಡುವೆ ಇರುವ ಹೃದಯ ಸಂಬಂಧ.
ತಂದೆ ತಾಯಿಗೆ ಮಕ್ಕಳೊಂದಿಗಿರುವ ಸಂಬಂಧವಲ್ಲ, ಗಂಡ ಹೆಂಡತಿಯ ಸಂಬಂಧವಲ್ಲ,ಸಹೋದರ ಸಹೋದರಿಯರ ಸಂಬಂಧವಲ್ಲ ಅದೆಲ್ಲಕ್ಕಿಂತಲೂ ಮಿಗಿಲಾದ ಸಂಬಂಧ... ಈ ಸಂಬಂಧದ ಬೆಲೆ ತಿಳಿಯಬೇಕಾದರೆ ಪ್ರಾಮಾಣಿಕವಾಗಿ ಹೃದಯದಿಂದ ಪ್ರವಾದಿ ﷺ ರನ್ನೊಮ್ಮೆ ಪ್ರೀತಿಸಿ ನೋಡಿ ಅಥವಾ ಪ್ರವಾದಿ ﷺ ರನ್ನು ಪ್ರೀತಿಸುವ ಆಶಿಕೀಗಳ ಕಡೆಗೆ ಮುಖಮಾಡಿ.
ಯಾ ಅಲ್ಲಾಹ್
ನಮ್ಮನ್ನು ಮುತ್ತು ಹಬೀಬರ ﷺ ನೈಜ ಆಶಿಕೀಗಳ ಸಾಲಿನಲ್ಲಿ ಸೇರಿಸು.ಹಬೀಬರನ್ನು ﷺ ಕಾಣುವ ಭಾಗ್ಯವ ನೀಡಿ ಕರುಣಿಸು.
آمِيـــــنْ يَا رَبَّ الْعَالَمِين
صَـلــُّوا عَـلَـى النَّبِيِّ ﷺِ ﷺِ ﷺ وَآلـِهِ
Comments
Post a Comment