ಹೃದಯ ಮತ್ತು ಕರ್ಮಗಳನ್ನಾಗಿದೆ ಅಲ್ಲಾಹನು ನೋಡುವುದು
ಹೃದಯ ಮತ್ತು ಕರ್ಮಗಳನ್ನಾಗಿದೆ ಅಲ್ಲಾಹನು ನೋಡುವುದು
ಅಬೂಹುರೈರಾ ರಳಿಯಲ್ಲಾಹು ಅನ್‌ಹು ಅವರಿಂದ ವರದಿ:
ಅಲ್ಲಾಹನ ಸಂದೇಶವಾಹಕರಾದ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು;
ತಪ್ಪು ಕಲ್ಪನೆಯ ಬಗ್ಗೆ ನೀವು ಜಾಗರೂಕರಾಗಿರಿ, ಏಕೆಂದರೆ ತಪ್ಪು ಕಲ್ಪನೆಯನ್ನಿಟ್ಟುಕೊಂಡು ಆಡುವ ಮಾತು ಮಹಾ ಸುಳ್ಳಾಗಿದೆ. ನೀವು ಇತರರ ನ್ಯೂನತೆಗಳನ್ನು ಹುಡುಕಿಕೊಂಡು ನಡೆಯದಿರಿ. ರಹಸ್ಯವನ್ನು ಬಹಿರಂಗಪಡಿಸದಿರಿ, ಇತರರನ್ನು ತಾತ್ಸಾರದಿಂದ ಕಾಣದಿರಿ, ನಿಮಗೆ ಆದೇಶಿಸಿದ ಪ್ರಕಾರ ನೀವು ಪರಸ್ಪರ ಸಹೋದರರಾಗಿರಿ. ಒಬ್ಬ ಮುಸ್ಲಿಮ್ ಮತ್ತೋರ್ವನ ಸಹೋದರನಾಗಿದ್ದಾನೆ. ಅವರು ಪರಸ್ಪರ ಅಕ್ರವೆಸಗುವುದಿಲ್ಲ, ಸೋಲಿಸುವುದಿಲ್ಲ, ಕೀಳಾಗಿ ಕಾಣುವುದಿಲ್ಲ ಎಂದ ಬಳಿಕ ತಮ್ಮ ಎದೆಯ ಮೇಲೆ ಕೈಯಿಟ್ಟು ತಖ್ವಾ (ದೇವಭಕ್ತಿ) ಇಲ್ಲಿದೆ ಎಂದರು. ಅವರು ಮೂರು ಸಲ ಹಾಗೆ ಮಾಡಿದರು.
ಒಬ್ಬ ಮುಸ್ಲಿಮನು ತನ್ನ ಸಹೋದರನನ್ನು ಕೀಳಾಗಿ ಕಂಡರೆ ಅವನ ಪಾಲಿಗೆ ಅದುವೇ ಕೆಡುಕಾಯಿತು. ಒಬ್ಬ ಮುಸ್ಲಿಮನಿಗೆ ಮತ್ತೋರ್ವ ಮುಸ್ಲಿಮನ ರಕ್ತ, ಅಭಿಮಾನ, ಸಂಪತ್ತು ನಿಷಿದ್ಧವಾಗಿದೆ. ಅಲ್ಲಾಹನು ನಿಮ್ಮ ದೇಹ ಅಥವಾ ರೂಪನ್ನು ನೋಡುವುದಿಲ್ಲ. ಅವನು ನೋಡುವುದು ನಿಮ್ಮ ಹೃದಯ ಮತ್ತು ಕರ್ಮಗಳನ್ನಾಗಿದೆ. ಮತ್ತೊಂದು ನಿವೇದನೆ:
ಪರಸ್ಪರ ಅಸೂಯೆ ಪಡದಿರಿ, ದ್ವೇಷ ಇಟ್ಟುಕೊಳ್ಳಬೇಡಿ, ನ್ಯೂನತೆಗಳನ್ನು ಹೇಳದಿರಿ, ವ್ಯಾಪಾರ ಮಾಡುವಾಗ ಅನಗತ್ಯವಾಗಿ ಸರಕುಗಳ ಬೆಲೆ ಹೆಚ್ಚಿಸದಿರಿ. ಓ ಅಲ್ಲಾಹನ ದಾಸರೇ, ನೀವು ಸಹೋದರರಾಗಿರಿ.
ಇನ್ನೊಂದು ನಿವೇದನೆ: ನೀವು ಜಗಳ ಮಾಡಬಾರದು, ಅವಗಣಿಸಬಾರದು, ದ್ವೇಷ ಇಟ್ಟು ಕೊಳ್ಳಬಾರದು, ಅಲ್ಲಾಹನ ದಾಸರೇ, ನೀವು ಸಹೋದರರಾಗಿರಿ.
[ಮುಸ್ಲಿಮ್, ಬುಖಾರಿ]
[ಬುಖಾರಿ|ಮುಸ್ಲಿಮ್|ತುರ್ಮುದಿ|ಅಬೂದಾವೂದ್|ಬೈಹಖಿ|ರಿಯಾಳುಸ್ಸಾಲಿಹೀನ್|ಹದೀಸ್ ಸಂಗ್ರಹ|ದಾರಿದೀಪ|ನೂರುಲ್ ಫಲಾಹ್]
Comments
Post a Comment