ಸುನ್ನತ್ತೆಂಬ ಸಂಪತ್ತು
*ಪಿಶಾಚಿಯ ಮೂರು ಗಂಟು*
ಅಬೂಹುರೈರಾ ರಳಿಯಲ್ಲಾಹು ಅನ್‌ಹು ಅವರಿಂದ ವರದಿ: ಅವರು ಹೇಳಿದರು:ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು;
ನಿಮ್ಮಲ್ಲೊಬ್ಬರು ನಿದ್ರಾವಸ್ಥೆಯಲ್ಲಿರುವಾಗ ಪಿಶಾಚಿಯು ಆತನ ತಲೆಯ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಬಿಗಿಯುವನು. *ನಿನಗೆ ರಾತ್ರಿಯು ಇನ್ನೂ ಸುದೀರ್ಘವಿದೆ, ನಿದ್ರಿಸುತ್ತಿರು* ಎನ್ನುತ್ತಾ ಕಟ್ಟು ಹಾಕುವನು. ಒಬ್ಬಾತನು ಎದ್ದು ಅಲ್ಲಾಹನ ದಿಕ್ರ್ ಹೇಳಿದರೆ ಒಂದು ಗಂಟು ಬಿಚ್ಚಲಿದೆ. ವುಳೂಅ್ ಮಾಡಿದರೆ ಇನ್ನೊಂದು ಗಂಟೂ ಬಿಚ್ಚಿ ಹೋಗುತ್ತದೆ. ನಮಾಝ್ ನಿರ್ವಹಿಸಿದರೆ ಅವನ ಎಲ್ಲಾ ಗಂಟುಗಳು ಬಿಚ್ಚಿ ಹೋಗುತ್ತದೆ. ಇದರಿಂದಾಗಿ, ಅವನು ಹುಮ್ಮಸ್ಸು, ಸಂತೃಪ್ತಿ ಇರುವವನಾಗಿ ಪ್ರಭಾತಕ್ಕೆ ಪ್ರವೇಶಿಸುವನು. ಇಲ್ಲದಿದ್ದರೆ ಮನೋಕ್ಲೇಶ, ಸೋಮಾರಿತನದಿಂದ ಪ್ರಭಾತಕ್ಕೆ ಪ್ರವೇಶಿಸುವನು.
[ಬುಖಾರಿ: ಕಿತಾಬುತ್ತಹಜ್ಜುದ್, ಮುಸ್ಲಿಮ್: ಕಿತಾಬು ಸ್ವಲಾತಿಲ್ ಮುಸಾಫಿರೀನ]
Comments
Post a Comment