ಇಲ್ಮ್
*ಇಲ್ಮ್ ಎಂಬ ಸಂಪತ್ತು*
ಅರಿವು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯು ಕಲಿತಿರಬೇಕಾದ ವಿಷಯವಾಗಿದೆ. ಬಬ್ಬ ಮನುಷ್ಯನಿಗೆ ಎಷ್ಟು ಅರಿವು ಇದೆಯೊ ಅದರಿಂದ ಅವರು ಸಮಾಜದಲ್ಲಿ ಗುರುತಿಸಿಕೊಂಡಿರುತ್ತಾರೆ, ಅರಿವು ಇಲ್ಲದವನಿಗೆ ಬೆಲೆಯೇ ಇರುವುದಿಲ್ಲ, ಉದಾ:- ಒಂದು ವಾಹನವನ್ನು ಓಡಿಸಬೇಕಾದರೆ ಅದಕ್ಕೆ ಬೇಕಾದಂತ ಸಾಧಾರಣ ಅರಿವು ತಿಳಿದಿರಬೇಕು ವಾಹನದ ಕುರಿತು ಏನು ತಿಳಿಯದವ ಹೋಗಿ ನಾನು ಕಾರು ಬಿಡುತ್ತೇನೆಂದು ಕಾರು ಬಿಡಲು ಹೋದರೆ ಏನಾದಿತು? ದೇವರೇ ಗತೀ😇
ಮಾತ್ರವಲ್ಲ ಧಾರ್ಮಿಕ ವಿಷಯಕ್ಕೆ ಬಂದರೆ ಅರಿವು ಅತ್ಯಗತ್ಯ , ಅದಕ್ಕೆ ಅರಬಿಯಲ್ಲಿರುವ ಪದವಾಗಿದೆ علم , ಹೌದು ಪ್ರತಿಯೊಂದು ಮುಸ್ಲಿಮನು ಇಲ್ಮ್ ಕಲಿಯಲು ಪರ್ಳ್ ಐನ್ ಆಗಿದೆ.
ಫರ್ಳ್ ಐನ್ ಎಂದರೆ ಪ್ರತಿಯೊಬ್ಬ ಕಲಿಯಲು ನಿರ್ಬಂಧವಾಗಿದೆ. ಕಾರಣ ಕೇವಲ ನಾವು ನಮಾಝ್ ಮಾಡಬೇಕಾದರೆ ಅದಕ್ಕೆ ಆದಂತಹ ಇಲ್ಮ್ ಅತ್ಯಾವಶ್ಯಕವಾಗಿದೆ, ಹೇಗೆ ನಿಯ್ಯತ್ ಮಾಡಬೇಕು ಎಂದು ತಿಳಿಯದವನು ಹೋಗಿ ನಮಾಝ್ ಮಾಡಿದರೆ ಏನಾದಿತು? ಅವನ ನಮಾಝ್ waste ಆಗಿದೆ. ಅದಕ್ಕೆ ಯಾವುದೇ ಪ್ರತಿಫಲವಿಲ್ಲ , ಇದು ಕೇವಲ ನಮಾಝ್ ನ ವಿಷಯದಲ್ಲಿ ಮಾತ್ರವಲ್ಲ, ಎಲ್ಲಾ ಇಬಾದತಿ ನಲ್ಲೂ ಹೀಗೆಯೇ......
ಸಾದಾ ವಿಷಯದಲ್ಲಿ ನಮಗೆ ಕಾಣುವ ಹಾಗೆ ಉದಾಹರಣೆಗೆ ಸಂಪತ್ತು , ಇದನ್ನು ನಾವು ಇತರರಿಗೆ ವಿತರಿಸಿದರೆ ನಮ್ಮಲ್ಲಿ ಮುಗಿದು ಹೋಗುತ್ತದೆ ಅದು ಯಾವುದೇ ವಸ್ತುವಿರಲಿ ಹಾಗೆಯೇ
ಆದರೆ ಇಲ್ಮ್ ನೀವು ಇನ್ನೂಬ್ಬರಿಗೆ ನೀಡಿದರೆ ನಿಮಗೆ ಜಾಸ್ತಿಯಾಗುತ್ತಾ ಹೋಗುತ್ತದೆ ವಿನಃ, ಕಡಿಮೆಯಾಗೂದಿಲ್ಲ, ಅದಾಗಿದೆ ಇಲ್ಮ್ ನ ಪವರ್
"ಅಲ್ಲಾಹನು ಯಾರಿಗಾದರೂ ಖೈರ್ ನೀಡಲು ಉದ್ದೇಶಿಸುವುದಾದರೆ ಅವನನ್ನು ಫಿಖ್ ಹ್ ಪಂಡಿತನನ್ನಾಗಿ ಮಾಡುವನು " ಇದು ನಿಜವಾದ ಸಂಗತಿಯಾಗಿದೆ ಕಾರಣ ಇಲ್ಮ್ ಇರುವ ಆಲಿಮ್ ಎಂದರೆ ಅಂಬಿಯ ಮುರ್ ಸಲುಗಳ ವಾರಿಸುದಾರರಾಗಿದ್ದಾರೆ ಇದು ನೆಬಿ (ಸ ಅ) ರು ಹೇಳಿದ ವಿಷಯವಾಗಿದೆ. ಹಣ , ಅಂತಸ್ತು ಇರುವವರು ಅಹಂಕಾರದಿಂದ ಇದ್ದರೆ ಇಲ್ಮ್ ಇರುವ ಆಲಿಮ್ ಯಾವಾಗಲೂ ವಿನಯದಿಂದ ತಲೆ ತಗ್ಗಿಸಿ ನಡೆದು ಹೋಗುವುದನ್ನು ನಾವು ಕಾಣಬಹುದು
ಅಲ್ಲಾಹನ ಇಷ್ಟ ದಾಸರಾದ ಎಲ್ಲಾ ವಲಿಯ್ಯ್ ಗಳು ಫಿಕ್ಹ್ ಪಂಡಿತರಾಗಿದ್ದಾರೆ, ಪಂಡಿತರಾದವರಿಗೆ ಮಾತ್ರ ಅಲ್ಲಾ ಹನ ಇಷ್ಟದಾಸರಾದ ವಲಿಯ್ಯ್ ಆಗಲು ಸಾಧ್ಯ, ಫಿಕ್ಹ್ ಪಂಡಿತರಲ್ಲದವರು ಒಮ್ಮೆಯೂ ಕೂಡ ವಲಿಯ್ಯ್ ಆಗಲು ಅಸಾಧ್ಯ, ಆದರಿಂದ ಅವರ ಹಿಂದೆ ಹೋಗಿ ವಂಚಿತರಾಗಬೇಡಿ
ಎಲ್ಲ ರಕ್ಕಿಂತಲೂ ಇಹಲೋಕದಲ್ಲೂ, ಪರಲೋಕದಲ್ಲೂ ಅತೀ ದೊಡ್ದ ಪಂಡಿತ ಹಬೀಬ್ (ಸ ಅ) ಆಗಿದ್ದಾರೆ.
Comments
Post a Comment