ಆತ್ಮೀಯ ಸಂಬಂಧ

🔹ಉಸ್ತಾದರ ಕನಸು ನನಸಾಯಿತು.

▪️ತಾಜುಲ್ ಉಲಮಾ ಮತ್ತು ತಾಜು ಶರೀಅಃ ನಡುವಿನ ಆತ್ಮೀಯ ಸಂಬಂಧ
    ಪೊಯ್ಯತ್ತಬೈಲಿನ ಸುಪ್ರಭಾತ.ಸುಬಹ್ ನಮಾಝ್ ಮುಗಿದುಮಕ್ಕಳು ತರಗತಿಗೆ ಬಂದರು.ತರಗತಿ ಆರಂಭವಾಗಿದೆ.ತಾಜು ಶ್ಶರೀಅ ಅಲಿ ಕುಂಞ ಉಸ್ತಾದರು ವಿಭಿನ್ನ ಮನಸ್ಥಿತಿಯಲ್ಲಿದ್ದಾರೆ‌. "ನನಗೆ ಉಳ್ಳಾಲಕ್ಕೆ ಹೋಗಬೇಕು" ಯಾವುದೇ ಮುನ್ಸೂಚನೆ ಇಲ್ಲದೆ ಉಸ್ತಾದ್ ಹೇಳಿದರು.

 "ನಿನ್ನೆ ಉಳ್ಳಾಲ್ತೋರ್ಕ್ ಖಿದ್ಮತ್ ಎಡುಕುನ್ನ ಕಿನಾವ್ ಕಂಡಿನ್" (ನಿನ್ನೆ ಉಳ್ಳಾಲ ತಂಙಳವರಿಗೆ ಖಿದ್ಮತ್ ಮಾಡುವ ಕನಸು ಕಂಡಿದೆ) ಮರ್ಮ ತಿಳಿಯಿತು.ಲುಹರ್ ನಮಾಝಿಗೆ ತಲುಪುವ ರೀತಿಯಲ್ಲಿ ಹೊರಟರು.ಉಳ್ಳಾಲ ತಲುಪಿದರು.
ತಾಜುಲ್ ಉಲಮಾ ರವರು ಆಸ್ಥಾನದಲ್ಲಿದ್ದಾರೆ.ನಮಾಝ್ ಮುಗಿಸಿ ಕೊಠಡಿಗೆ ಪ್ರವೇಶಿಸಿದರು.

   ಸಂಭಾಷಣೆಯ ನಡುವೆ ಊಟದ ಸಮಯವಾಯಿತು.

    ಖಾದಿಮ್ ಟೇಬಲ್ ಮೇಲೆ ಟಿಫಿನ್ ತಂದಿಟ್ಟು, ಬಡಿಸದೆ ಹೊರಗೆ ಹೋದರು.ಮಾತುಕತೆ ನಿಲ್ಲಿಸಿ ಊಟಕ್ಕೆ ತಯಾರಾದರು. ತಂಙಳರು ಖಾದಿಮರನ್ನು ತುಂಬಾ ಕರೆದರು.ಆದರೆ, ಅವರು ಬರಲಿಲ್ಲ.ಇದನ್ನು ನೋಡಿದ ಆಲಿಕುಂಞ ಉಸ್ತಾದರು ಎದ್ದು ನಿಂತು. ತಟ್ಟೆಯನ್ನು ಹುಡುಕಿ ತೊಳೆದು ಟೇಬಲಲ್ಲಿ ಇಟ್ಟರು.ಆಹಾರವನ್ನು ತೆರೆದು
ತಂಙಳವರಿಗೇ ಬಡಿಸಿದರು.ಹಾಗೆ..ಮಾತುಕತೆ ನಡೆಸಿ ಆಹಾರ ತಿಂದರು.ವಿದಾಯ ಹೇಳಿ ದರ್ಸ್ ತಲುಪಿದರು.
ಉಸ್ತಾದರು ಮುಂದಿನ ತರಗತಿಗೆ ಸಿದ್ಧರಾದರು.

    ಈಗ ಮುಖ ಪ್ರಸನ್ನತೆಯಿದೆ ಮನಸ್ಸು ಹೆಚ್ಚು ಸಂತೃಪ್ತಿಯಾಗಿದೆ. "ಅಲ್ಹಮ್ದುಲಿಲ್ಲಾ".ಕನಸು ಕಂಡಂತೆ ಖಿದ್ಮತ್ ಗೆ ಅವಕಾಶ ಸಿಕ್ಕಿತು.ತೊಳೆದದ್ದು ಪಾತ್ರೆಗಳನ್ನು ಮಾತ್ರವಲ್ಲ,ಸ್ವಮನಸ್ಸನ್ನು ಕೂಡ.ಅದು ದೀರ್ಘಕಾಲಕ್ಕಿರುವ ಆತ್ಮೀಯ ಶಕ್ತಿ.ಆತ್ಮೀಯತೆ ಮಿತಿಯಿಲ್ಲದೆ ಬಂದಾಗ ಸ್ವಪ್ನ ಸಫಲಗೊಳ್ಳುತ್ತೆ.

▪️ "ನನಗೆ ತುಂಬಾ ಆಯಾಸವಾಗಿದೆ. ಅಲಿ ಕುಂಞಿ ಮೊಯ್ಲಾರ್ ಕರೆದಿದ್ದರಿಂದ ಬಂದಿದ್ದೇನೆ ಅವರು ಕರೆದರೆ ಹೇಗೆ ಬರದಿರಲು ಸಾಧ್ಯ? ಅವರು ಒಳ್ಳೆಯ ವ್ಯಕ್ತಿ.
ಅವರೊಬ್ಬ ಒಳ್ಳೆಯ ಮನುಷ್ಯರಾಗಿದ್ದಾರೆ. "

      ತುಂಬಾ ಸುಸ್ತಾದ ಸಂದರ್ಭದಲ್ಲಿ ಪೊಯ್ಯತ್ತಬೈಲಿನ ಒಂದು ಕಾರ್ಯಕ್ರಮಕ್ಕೆ ತಲುಪಿದ ತಾಜುಲ್ ಉಲಮಾ ಕಾರಿನಿಂದ ಇಳಿಯುವ ಮುನ್ನ ಹೇಳಿದ್ದು. 
ತಾಜುಲ್ ಉಲಮಾ - ಉಸ್ತಾದರ ನಡುವಿನ ಮಹೋನ್ನತ ಬಾಂಧವ್ಯದ ಮುಕುಟ ಉದಾಹರಣೆ.

▪️ಉಳ್ಳಾಲ ಉರೂಸ್ ಕಾರ್ಯಕ್ರಮ ನಡುವೆ
ಉಸ್ತಾದರ ಮೊಹಲ್ಲವಾದ ಓಲಯಂ ಉರುಸ್‌ಗೆ ಕರೆದುಕೊಂಡು ಬರಲು ಹೋದ ಕಾರ್ಯಕರ್ತನಿಗೆ
"ಇಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಹೇಗೆ ಬರುವುದು? ಅವರು ಕರೆದರೆ ಬಾರದೇ ಇರಲು ಸಾಧ್ಯವೇ..?
 ▪️ತಾಜುಲ್ ಉಲಮಾರವರು ಆಲಿಕುಂಞ ಉಸ್ತಾದರ ಉಸ್ತಾದ್ ಅಲ್ಲದಿದ್ದರೂ ಅವರ ಪರಸ್ಪರ ಬಾಂಧವ್ಯವು ಗುರು-ಶಿಷ್ಯ ಸಂಬಂಧವನ್ನು ಮೀರಿತ್ತು.

 ▪️ತಾಜುಲ್ ಉಲಮಾ ಕೊನೆಯದಾಗಿ ಬಂದಿದ್ದ ಪೊಯ್ಯತ್ತಬೈಲಿನ ಉರುಸ್ ಕಾರ್ಯಕ್ರಮದಲ್ಲಿ ಉಸ್ತಾದರು ಮಾಡಿದ ಸ್ವಾಗತ ಭಾಷಣವು ಆ ಆಧ್ಯಾತ್ಮಿಕ ಅರ್ಥಗಳನ್ನು ಇನ್ನಷ್ಟು ಬೆಳೆಸಿತು.

"ನಾನು ಅರ್ಥಮಾಡಿಕೊಂಡದ್ದು" ತಾಜುಲ್ ಉಲಮಾ ರು ಕುತುಬುಝ್ಝಮಾನ್ ಎಂದಾಗಿದೆ "ಈ ಪದಬಳಕೆಯನ್ನು ಕೇಳಿ ವೇದಿಕೆಯಲ್ಲಿದ್ದವರು ಭಯಗೊಂಡರು.ಆ ಪದಬಳಕೆಗೆ ತಾಜುಲ್ ಉಲಮಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಅಲ್ಲಿದ್ದವರು ಚಿಂತಿತರಾಗಿದ್ದರು.ನಿರಾಶೆಗೊಳ್ಳುವರಾ? ಉಸ್ತಾದರ ಮೇಲೆ ಕೋಪಗೊಳ್ಳುತ್ತಾರೆಯೇ.

     ಹತ್ತಿರದಲ್ಲಿದ್ದವರು ತಾಜುಲ್ ಉಲಮಾರ ಕಡೆ ನೋಡಿದರು.ಅದರೆ ಆಶ್ಚರ್ಯ ತಾಜುಲ್ ಉಲಮಾ ಏನೋ ಆತ್ಮೀಯತೆಯ ಲಹರಿಯಲ್ಲಿದ್ದರು.ತನ್ನಷ್ಟಕ್ಕೆ ತಾನು ಏನೋ ಹೇಳುತ್ತಿದ್ದರು.ತಾಜುಲ್ ಉಲಮಾ ರು ತುಟಿ ಅಲ್ಲಾಡಿಸಿ ನಿಧಾನವಾಗಿ ಈ ಬೈತನ್ನು ಪಠಿಸಿದರು.

 " قدمي علی رقبات الاولياء طرا "
 ಈ ಪದಬಳಕೆಯ ಸಾಂಕೇತಿಕ ಅಂಶಗಳು ಇಲ್ಲಿ ಗುರಿಯಾಗಿಲ್ಲ.ಅವರ ನಡುವಿನ ಸಂಬಂಧ ಆಧ್ಯಾತ್ಮಿಕತೆಯಲ್ಲಿ ಬಲಿಷ್ಠವಾಗಿತ್ತು. ಅಂದರೆ ಅವರು ಒಬ್ಬರನ್ನೊಬ್ಬರು ಹಾಗೆ ಅರ್ಥಮಾಡಿಕೊಂಡರು.

➖➖➖➖➖➖➖➖ ➖➖➖➖➖➖➖➖

Comments

Popular posts from this blog

ಮೂಗುತಿ

ಖುರ್‌ಆನ್ ಹೇಳಿದ ಕರಾಮತ್

ಇಸ್ತಿಗಾಸ