ಶೈಖ್ ಜೀಲಾನಿ (ರ.ಅ)
ಪ್ರವಾದಿ ﷺ ರನ್ನು ಕನಸಲ್ಲಿ ಕಂಡ ಶೈಖ್ ಜೀಲಾನಿ ( ರ )
〰️〰️〰️〰️〰️〰️〰️〰️ 〰️〰️〰️〰️〰️〰️〰️〰️
ಒಮ್ಮೆ ಳುಹ್ರ್ ನಮಾಝ್ ನಂತರ ಶೈಖ್ ಜೀಲಾನಿ ( ರ) ರವರು ನಬಿ ﷺ ರವರನ್ನು ಕನಸಲ್ಲಿ ದರ್ಶಿಸಿದರು.
ಈ ವಿಷಯವನ್ನು ಶೈಖ್ ರವರು ಹೇಳುತ್ತಾರೆ ; ಒಮ್ಮೆ ಬಗ್ದಾದ್ ಮಸೀದಿಯಲ್ಲಿ ಳುಹ್ರ ನಮಾಜ್ ಮಾಡಿ ಕುಳಿತಿದ್ದೆ. ಅಲ್ಲಿಗೆ ನಿದ್ರೆ ಆವರಿಸಿತು.ಆಗ ಪುಣ್ಯ ಪ್ರವಾದಿ ﷺ ರವರು ಕನಸಲ್ಲಿ ಬಂದು ಕೇಳಿದರು" ಮಗನೇ ! ಯಾಕೆ ನೀನು ಜನರಿಗೆ ಪ್ರವಚನ ನೀಡುತ್ತಿಲ್ಲ ? "
ನಾನು ಅನರಬಿ. ಬಗ್ದಾದಿನ ಶುದ್ಧ ಅರಬಿ ಭಾಷಿಕರ ಮುಂದೆ ನಾನು ಹೇಗೆ ಪ್ರವಚನ ನೀಡಲಿ ? ಎಂದು ನಾನು ಹೇಳಿದೆನು. ಆಗ ನಬಿ ﷺ ರವರು ನನ್ನ ಬಾಯಿ ತೆರೆಯುವಂತೆ ಹೇಳಿದರು. ನಾನು ಬಾಯಿ ತೆರೆದೆ.
ನಬಿ ﷺ ರವರು ನನ್ನ ನಾಲಗೆಗೆ ಏಳು ಬಾರಿ ತನ್ನ ಪವಿತ್ರ ಉಗುಳನ್ನು ಲೇಪಿಸಿದರು."ಇನ್ನು ಜನರಿಗೆ ಉಪದೇಶ ಕೊಡು. ಅವರಿಗೆ ಸನ್ಮಾರ್ಗ ತೋರು"ಎಂದು ಹೇಳಿದರು.
ಅದರ ನಂತರ ಹ.ಅಲಿಯವರು ( ರ) ಬಂದು ನನ್ನ ನಾಲಗೆಗೆ ಆರು ಬಾರಿ ಉಗುಳು ಲೇಪಿಸಿದರು. ಏಳುಬಾರಿ ಲೇಪಿಸದಿರಲು ಕಾರಣವೇನು ಎಂದು ಕೇಳಿದೆ. ನಬಿ ﷺ ರವರ ಮೇಲಿನ ಗೌರವಕ್ಕಾಗಿ ಎಂದರು
- ಇಮಾಮ್ ಸುಯೂಥೀ ( ರ)
ಅಲ್ ಹಾವೀ: 2- 259
▪️▪️▪️▪️▪️▪️▪️ ▪️▪️▪️▪️▪️▪️▪️
Comments
Post a Comment