ಹೆಣ್ಣಿಗೆ ಸ್ವಾತಂತ್ರ ಕೊಟ್ಟ ಪ್ರವಾದಿ ಮುಹಮ್ಮದ್ﷺ
ಹೌದು,1400 ವರ್ಷಕ್ಕಿಂತ ಮೊದಲು ಹೇಳಿದ ಮಾತೆಲ್ಲವೋ ಈಗ ಸತ್ಯವಾಗುತ್ತಾ ಬರುತ್ತಾ ಇದೆ, ನಬಿಯರ ಶತ್ರು ಸಮೂಹವೂ ಕೂಡ ಅಂಗೀಕರಿಸಿದ ವಿಷಯವಾಗಿದೆ , ಅಲ್ ಅಮೀನ್_ ,ಎಲ್ಲಿಂದ ಬರೆಯಬೇಕು ಹೇಗೆ ಬರೆಯಬೇಕು ಎಂದು ಗೊತ್ತಾಗುತ್ತಿಲ್ಲ ಆದರೆ ಒಂದು ಕಡೆಯಿಂದ ಬರೆಯುತ್ತೇನೆ
ಪ್ರತಿಯೊಂದು ತಂದೆ ತಾಯಿ ಜನಿಸಿದ ಮಗುವಿಗೆ ಮೊಟ್ಟಮೊದಲಾಗಿ ಕಲಿಸಬೇಕಾದ ವಿಷಯ ಅದು ಪ್ರವಾದಿ ಮುಹಮ್ಮದ್(ಸ.ಅ) ರವರ ಕುರಿತಾಗಿದೆ , ಆ ಪ್ರವಾದಿಯವರ ಜೀವನದ ಕುರಿತಾಗಿದೆ ,ಹೆತ್ತ ಮಗು ಹೆಣ್ಣಾಗಿದ್ದರೆ ಕೂಡಲೇ ಮಣ್ಣಲ್ಲಿ ಹೂತುಕೊಳ್ಳುವ ಸಂಪ್ರದಾಯವು ಒಂದು ಕಾಲದಲ್ಲಿ ಇತ್ತು.
ಆ ಸಂಪ್ರದಾಯವನ್ನೇ ಇಲ್ಲವಾಗಿಸಿ ಜಗತ್ತಿಗೆ ಮೊಟ್ಟ ಮೊದಲು ಹೆಣ್ಣು ಮಗುವಿಗೆ ಭೂಮಿಯಲ್ಲಿ ಜೀವಿಸುವ ಸ್ವಾತಂತ್ರ್ಯವನ್ನು ನೀಡಿದ ಪ್ರವಾದಿ ಮುಹಮ್ಮದ್(ಸ.ಅ),ಆ ಹೆಣ್ಣು ಮಗುವಿಗೆ ಯಾವ ಧರ್ಮದಲ್ಲಿಯೂ ತಮ್ಮ ಕುಟುಂಬದ ಆಸ್ತಿಯ ಭಾಗವು ಕೊಡದೆ ಇದ್ದಾಗ ಪ್ರವಾದಿ (ಸ.ಅ) ಹೇಳಿದರು ಸ್ತೀಗಳಿಗೆ ಕೂಡ ಅದರಲ್ಲಿ ಹಕ್ಕು ಇದೆ ಎಂದು ಮೊಟ್ಟ ಮೊದಲಾಗಿ ಸ್ತ್ರೀಗಳಿಗೆ ತಮ್ಮ ಕುಟುಂಬದ ಆಸ್ತಿಯಲ್ಲಿ ಅವಕಾಶವನ್ನು ಕೊಟ್ಟ ದರ್ಮವಾಗಿದೆ. ಇಸ್ಲಾಂ,
ಮಾತ್ರವಲ್ಲ ಆ ಹೆಣ್ಣಿನ ಸಂರಕ್ಷಣೆಗಾಗಿ ಅವಳಿಗೆ ನಮಾಜ್ ಮಾಡಲು ಅತ್ಯಧಿಕವಾಗಿ ಪ್ರತಿಫಲ ಸಿಗುವ ಸ್ಥಳ ಅದು ಮಸೀದಿಯಲ್ಲ ಆ ಹೆಣ್ಣಿಗೆ ಅದು ಅವರ ಮನೆಯ ಒಳಗಿನ ಕೋಣೆಯಾಗಿದೆ,ಇಷ್ಟೊಂದು ಸುಂದರವಾದ ಆಶಯವನ್ನು ಬೇರೆ ಎಲ್ಲಿ ನಮಗೆ ಕಾಣಬಹುದು,
ಅತ್ಯಧಿಕವಾಗಿ ಹೆಣ್ಣು ಹುಟ್ಟಿದ ತಂದೆ ತಾಯಿಯವರಿಗೆ ಸಾಂತ್ವನವಾಗಿಸಿ ಪ್ರವಾದಿಯವರು ಹೇಳಿದರು ಒಂದು ತಂದೆ ತಾಯಿಯರಿಗೆ ಮೂರು ಹೆಣ್ಣು ಹುಟ್ಟಿದರೆ ಅವರಿಗೆ ಸ್ವರ್ಗ ವಿದೆ ಎಂದು ಕಲ್ಪಿಸಿದ ಧರ್ಮವಾಗಿದೆ, ಇಸ್ಲಾಂ
ಮಾತ್ರವಲ್ಲ ಸಜ್ಜನ ರೀತಿಯಲ್ಲಿ ಜೀವಿಸಿದ ಪುರುಷನಿಗೆ ಸ್ವರ್ಗದಲ್ಲಿ ಹೂರುಲ್ ಹೀನ್ ಎಂಬ ಸ್ವರ್ಗ ಅಪ್ಸರೆಗಳು ಇದೆಯೆಂದು ಹೇಳಿದಾಗ (ಒಂದು ಚಿಂತನೆ??🤔🤔 ಯಾರಾಗಿದ್ದಾರೆ ಸ್ವರ್ಗ ಅಪ್ಸರೆಗಳಾದ ಹೂರು ಲ್ ಹೀನ್🤔 ಎಂಬುವುದು , ಜಿಬ್ರೀಲ್ (ಅ,ಸ) ರು ಆ ಸ್ಪರ್ಗ ಅಪ್ಸರೆಯನ್ನು ಕಂಡಾಗ ಅವರು Smile ಮಾಡುವಾಗ ಅವರ ಒಂದು ಹಲ್ಲನ್ನು ನೋಡಿ ಅದರ ಪ್ರಕಾಶವನ್ನು ಕಂಡು ಅಲ್ಲಿಯೇ ಗಾಬರಿಯಾಗಿ ನಿಂತು ಹೋಯಿತು ),
ಆಗ ಸ್ವಹಾಬಿಗಳು ಕೇಳಿದರು; ಅಲ್ಲ ನೆಬಿಯವರೆ, ಹೇ ದುನಿಯಾದಲ್ಲಿ ಇಸ್ಲಾಮಿನ ರೂಪದಲ್ಲಿ ಜೀವಿಸಿದ ಪತ್ನಿ ಯಂದಿರು ಇದ್ದಾರೆ ಅವರಿಗೆ ತಮ್ಮ ಗಂಡಂದಿರು ಸಿಗುವುದಿಲ್ಲವೋ? ಎಂದು ಕೇಳಿದಾಗ ನೆಬಿಯವರು ಹೇಳಿದರು:ಇಸ್ಲಾಮಿ ಹೇಳಿದ ರೂಪದಲ್ಲಿ ಜೀವಿಸಿದ ಪತ್ನಿಯಂದಿರಾಗಿದೆ ಆ ಹೂರು ಲ್ ಹೀನ್ ಸ್ವರ್ಗ ಅಪ್ಸರೆಗಿಂತ ಅಧಿಕ ಸೌಂದರ್ಯದಲ್ಲಿ ಪ್ರಕಾಶಿಸುತ್ತಾ ಇರುತ್ತಾರೆ,ಆ ಪತ್ನಿಂದಿರನ್ನು ಕಾಣುವಾಗ ಹೂರುಲ್ ಹಿನ್ ಸ್ತ್ರೀಗಳು ಅವರೆದುರು ಕಾಣುವುದೇ ಇಲ್ಲ ,
ನೋಡಿ ಸಹೋದರಿಯರೇ,ಸ್ವರ್ಗದಲ್ಲಿ ಕೂಡ ಸ್ತ್ರೀಗಳಿಗೆ ಅಷ್ಟೊಂದು ವಿಶೇಷವನ್ನು ಕೊಟ್ಟ ಧರ್ಮವಾಗಿದೆ ಇಸ್ಲಾಂ.
Comments
Post a Comment