ಕರಾಮತ್

🔹ಕರಾಮತ್ - ಔಲಿಯಾಗಳಿಗೆ ಅಲ್ಲಾಹನು ನೀಡಿದ ಗಿಫ್ಟ್ -.
〰️〰️〰️〰️〰️〰️〰️〰️ 〰️〰️〰️〰️〰️〰️〰️
▪️ ಔಲಿಯಾಗಳ ಬಗ್ಗೆ ಅಲ್ಲಾಹನು ಹೇಳಿದ್ದು ಹೀಗೆ..
ಅಧ್ಯಾಯ: 10 ಶ್ಲೋಕ: 62
أَلَآ إِنَّ أَوْلِيَآءَ ٱللَّهِ لَا خَوْفٌ عَلَيْهِمْ وَلَا هُمْ يَحْزَنُونَ

*ತಿಳಿಯಿರಿ, ನಿಶ್ಚಯವಾಗಿಯೂ ಅಲ್ಲಾಹನ ಔಲಿಯಾಗಳಿಗೆ ಯಾವತ್ತೂ ಭಯವಿಲ್ಲ. ಅವರು ದುಃಖಿಸುವುದೂ ಇಲ್ಲ.*

▪️ ಕರಾಮತ್ ಅಂದರೆ..?
ಔಲಿಯಾಗಳು ಅಲ್ಲಾಹನ ಸಂಪ್ರೀತಿ ಸಂಪಾದಿಸಿದವರು.
ಅಲ್ಲಾಹನ ತೃಪ್ತಿ ಬಯಸಿ ಮಾತ್ರ ಜೀವಿಸಿದವರು.
ಅಲ್ಲಾಹನಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು.
ಆರಾಧನೆ,ಬೋಧನೆ, ದ್ಸಿಕ್ರ್ - ಸ್ವಲಾತ್‌ಗಳ ಮೂಲಕ ಅಲ್ಲಾಹನ ಸಾಮೀಪ್ಯ ಸಿದ್ದಿಸಿದವರು..
ಅವರ ಭಯ ಭಕ್ತಿಗೆ ಮೆಚ್ಚಿ ಅಲ್ಲಾಹು ಅವರನ್ನು ಗೌರವಿಸಿದನು.  
ಅವರಿಗೆ ವಿಶೇಷ ಸಾಮರ್ಥ್ಯ ನೀಡಿದನು.
ಅದಕ್ಕೆ ಶರೀ‌ಅತ್ ಪರಿಭಾಷೆಯಲ್ಲಿ ಕರಾಮತ್ ಎಂದು ಹೆಸರು.

▪️ಜನ ಸಾಮಾನ್ಯರಿಂದ ಅವರು ಇಚ್ಚಿಸಿಯೋ, ಇಚ್ಚಿಸದೆಯೂ ಸಾಮಾನ್ಯ ಘಟನೆಗಳು 
ಉಂಟಾಗುವಂತೆ 
ಮಹಾತ್ಮರಿಂದ ಅವರು ಇಚ್ಚಿಸಿಯೋ, ಇಚ್ಚಿಸದೆಯೋ ಅಸಮಾನ್ಯ ಘಟನೆಗಳು ಉಂಟಾಗುತ್ತವೆ.

▪️ ಕರಾಮತ್ ಬಗ್ಗೆ ಪ್ರವಾದಿ ﷺ  ಹೇಳುತ್ತಾರೆ.

ಅಲ್ಲಾಹನು ಹೇಳುತ್ತಾನೆ. 
ಕಡ್ಡಾಯ ಮತ್ತು ಸುನ್ನತ್ ಕರ್ಮಗಳ ಮೂಲಕ ನನಗೆ ಹತ್ತಿರವಾಗುವ ದಾಸನನ್ನು ನಾನು ಇಷ್ಟ ಪಡುತ್ತೇನೆ. 
ಹಾಗೆ ಇಷ್ಟಪಟ್ಟರೆ ಅವರ ಕಣ್ಣು, ಕಿವಿ, ಕಾಲು , ನಾಲಿಗೆ , ಹೃದಯ ನಾನಾಗುತ್ತೇನೆ. 
ಅಲ್ಲಾಹನು ಅವರ ಕಿವಿಯಾದರೆ, ಅವರು ಸಮೀಪ - ದೂರದಲ್ಲಿರುವುದನ್ನು ಸಮಾನವಾಗಿ ಕಾಣುತ್ತಾರೆ.
ಅಲ್ಲಾಹನು ಅವರ ಕಣ್ಣಾದರೆ 
ಅವರು ಸಮೀಪ - ದೂರದಲ್ಲಿರುವುದನ್ನು ಒಂದೇ ರೀತಿ ಕಾಣುತ್ತಾರೆ.
ಅಲ್ಲಾಹನು ಅವರ ಕೈಯಾದಾಗ 
ಅವರು ಸಮೀಪ - ದೂರ, ಕಷ್ಟ - ಸುಖ ಎಲ್ಲಾ ಸಂಗತಿಗಳನ್ನು ಸಮಾನವಾಗಿ ವ್ಯವಹರಿಸುತ್ತಾರೆ
( ರಾಝೀ 11 / 92 )

▪️ಅಬೂಹುರೈರಾ ( ರ ) ರವರಿಂದ ವರದಿ . 
ಪ್ರವಾದಿ ﷺ ಹೇಳುತ್ತಾರೆ.

ಮನೆಗಳಲ್ಲಿ ಪ್ರವೇಶ ದೊರಕದ, ಜಿಡ್ಡುಗಟ್ಟಿದ ತಲೆಗೂದಲಿನ ಎಷ್ಟೊಂದು ಮಂದಿ ಇದ್ದಾರೆ.
ಅವರು ಆಣೆ ಹಾಕಿ ಏನಾದರೂ ಹೇಳಿದರೆ ಅಲ್ಲಾಹನು ಖಂಡಿತ ಮಾಡಿ ಕೊಡುವನು.
( ಹದೀಸ್ ಮುಸ್ಲಿಂ )
▪️ಈ ಹದೀಸ್ ವ್ಯಾಖ್ಯಾನಿಸಿ ಇಮಾಂ ನವವೀ ( ರ ) ಹೇಳುತ್ತಾರೆ.
ಒಂದು ಘಟನೆ ಸಂಭವಿಸುವುದೆಂದು ಅವರು ಆಣೆ ಹಾಕಿ ಹೇಳಿದರೆ, ಅಲ್ಲಾಹನು ಅದನ್ನು ಜಾರಿ ಮಾಡಿಯೇ ತೀರುವನು. 
ಆಣೆ ಹಾಕಿದ ವಿಚಾರದಲ್ಲಿ ತಪ್ಪು ಉಂಟಾಗದಂತೆ ರಕ್ಷಿಸುವ ಮೂಲಕ ಹಾಗೂ 
ಅವರು ಕೇಳಿದ್ದಕ್ಕೆ ಉತ್ತರಿಸುವ ಮೂಲಕ ಅಲ್ಲಾಹು ಅವರನ್ನು ಗೌರವಿಸುವನು. 

▪️ ಜನ ಸಾಮಾನ್ಯರ ಬಳಿ ಅವರು ನಿಂದಿಸಲ್ಪಟ್ಟರೂ ಅಲ್ಲಾಹನ ಬಳಿ ಅವರು ಉನ್ನತ ಸ್ಥಾನ ಪಡೆದಿರುತ್ತಾರೆ.
( ಶರಹ್ ಮುಸ್ಲಿಂ 8 - 423 )

▪️ ಔಲಿಯಾಗಳಿಗೆ ಗೌರವ ಸತ್ಯ ವಿಶ್ವಾಸಿಗಳ ಲಕ್ಷಣ.

ಒಟ್ಟಿನಲ್ಲಿ ಅಲ್ಲಾಹನು ಗೌರವಿಸಿದ ಮಹಾತ್ಮರನ್ನು ಗೌರವಿಸುವುದು ಸತ್ಯ ವಿಶ್ವಾಸಿಗಳ ಕರ್ತವ್ಯ. 
ನಮ್ಮ ದೃಷ್ಟಿಯಲ್ಲಿ ಅವರು ಸಾಮಾನ್ಯರಂತೆ, ನಿಂದ್ಯರಂತೆ ಕಂಡರೂ ,
ಅಲ್ಲಾಹನ ಬಳಿ ಅವರು ಉನ್ನತ ಸ್ಥಾನದಲ್ಲಿರುತ್ತಾರೆ.
ಅವರನ್ನು ನಿಂದಿಸಿದರೆ ಅವರಿಗೆ ಏನೂ ಸಂಭವಿಸದು. 
ಆದರೆ ನಮ್ಮ ಇಹ - ಪರ ನಷ್ಟವಾದೀತು.

Comments

Popular posts from this blog

ಮೂಗುತಿ

ಖುರ್‌ಆನ್ ಹೇಳಿದ ಕರಾಮತ್

ಇಸ್ತಿಗಾಸ