ಮಹಾತ್ಮರ ಆಶೀರ್ವಾದ
ಮಹಾತ್ಮರ ಆಶೀರ್ವಾದ - ಇಹ ಪರ ರಕ್ಷಣೆಗೆ ರಹದಾರಿ - ತಾಜುಲ್ ಉಲಮಾ
ಚಾಲಿಯಂ ನೂರುದ್ದೀನ್ ಶೈಖ್ ( ರ )
ಸುಮಾರು 400 ವರ್ಷಗಳ ಹಿಂದೆ ಜನಿಸಿದ ಮಹಾತ್ಮ. ಮಂಬುರಂ ತಂಙಲ್ ರವರು ಯಾವಾಗಲೂ ಇಲ್ಲಿಗೆ ಝಿಯಾರತ್ ಮಾಡಲು ಬರುತ್ತಿದ್ದರು.ನೂರುದ್ದೀನ್ ಶೈಖ್ ರವರ ಉರೂಸ್ ಸಮಾರಂಭಕ್ಕೆ ತಾಜುಲ್ ಉಲಮಾ ಖಾಯಂ ಅತಿಥಿಯಾಗಿದ್ದರು. ಒಮ್ಮೆ ಉರೂಸ್ ಸಮಾರಂಭಕ್ಕೆ ಬಂದಾಗ ವೇದಿಕೆಯಲ್ಲಿ ದುಃಖದಿಂದ ಹೇಳಿದರು.ತಾಜುಲ್ ಉಲಮಾರವರು ಶಾರೀರಿಕವಾಗಿ ತುಂಬಾ ನೋವು ಅನುಭವಿಸುವ ಕಾಲವಾಗಿತ್ತದು.
ಶೈಖ್‌ರವರೇ ತಮಗೆ ಇಷ್ಟವಿಲ್ಲದ ಏನಾದರೂ ನಮ್ಮಿಂದ ಉಂಟಾಗಿದ್ದರೆ ನಮ್ಮನ್ನು ಕ್ಷಮಿಸಿ.
ನಮ್ಮ ನಡವಳಿಕೆಗಳಲ್ಲಿ , ನಡೆ ನುಡಿಗಳಲ್ಲಿ ತಮಗೆ ಬೇಸರವಾಗಿದ್ದರೆ ನಮಗೆ ಮಾಫ್ ಮಾಡಿ.
ನಾವು ಬೇಕಂತಲೇ ಮಾಡಿದ್ದಲ್ಲ. ದೈಹಿಕವಾಗಿ ನಾವು ಬಲಹೀನವಾಗಿದ್ದರಿಂದ ಆಶಿಸ್ತಿನ ಕಾರ್ಯಗಳು ನಮ್ಮಿಂದ ಉಂಟಾಗಿರಬಹುದು.
ನಂತರ ಹೇಳಿದರು,ನನ್ನ ಜನ್ಮ ನಾಡು ಕರುವತ್ತಿರುತ್ತಿಯಾಗಿತ್ತು. ದಿನಾಲೂ ನಾನು ಸ್ಕೂಲ್‌ಗೆ ಹೋಗಿ, ಬರುವುದು ಈ ಪವಿತ್ರ ದರ್ಗಾದ ಸಮೀಪದಲ್ಲಾಗಿತ್ತು.ಹಾಗೆಲ್ಲಾ ನಾನು ಚಿಕ್ಕಂದಿನಲ್ಲಿಯೇ ಈ ದರ್ಗಾದ ಬಳಿ ಬಂದು ಫಾತಿಆ ಓದಿ ಝಿಯಾರತ್ ಮಾಡಿ ಸ್ಕೂಲ್‌ಗೆ ಹೋಗುತ್ತಿದ್ದೆ. ಅಂದು ಸ್ಕೂಲ್ ಗೆ ಹೋಗಿ ಬರಲು ಬೇರೆ ದಾರಿ ಇರುತ್ತಿತ್ತು.ಅದರೆ ನೂರುದ್ದೀನ್ ಶೈಖ್‌ರವರ ಆಶಿರ್ವಾದ ಪಡೆಯಲಿಕ್ಕಾಗಿ ಇಲ್ಲಿಂದಲೇ ಹೋಗುತ್ತಿದ್ದೆ.
ಇಂತಹ ಮಹಾತ್ಮರ ಆಶೀರ್ವಾದದಿಂದಲೇ ಇಹ - ಪರ ರಕ್ಷಣೆ ಹೊಂದಾಬೇಕೆಂದು ನನ್ನ ಅಭಿಲಾಷೆಯಾಗಿತ್ತು.ತಾಜುಲ್ ಉಲಮಾರ ಜೀವನ ಚರಿತ್ರೆಗಳು ಸಮುದಾಯಕ್ಕೆ ಮಾದರಿಯಾಗಿದೆ.ಮಹಾತ್ಮರ ಜೊತೆಗಿನ ಆತ್ಮೀಯ ಸಂಬಂಧಗಳು ಇಹ - ಪರ ರಕ್ಷಣೆಗೆ ರಹದಾರಿಯಾಗಿದೆ.
Comments
Post a Comment