ಶೈಖ್ ಜೀಲಾನಿ(ರ.ಅ) ರನ್ನು ಮಲಕುಗಳು ಗೌರವಿಸುತ್ತಿದ್ದರು ಶೈಖ್ ಅಬ್ದುಲ್ ರಝಾಕ್(ರ.ಅ) ಹೇಳುತ್ತಾರೆ :- ಒಂದು ದಿನ ನಾನು ಶೈಖ್ ಜೀಲಾನಿ(ರ.ಅ) ರಲ್ಲಿ ತಾವು ಅಲ್ಲಾಹನ ವಲಿಯ್ಯ್ ಎಂದು ಯಾವಾಗ ತಿಳಿದಿರೆಂದು ಕೇಳಿದಾಗ, ಮಹಾನರು ಈ ರೀತಿ ಉತ್ತರಿಸಿದರು, ನನಗೆ ಹತ್ತು ವರ್ಷ ಪ್ರಾಯವಿದ್ದಾಗ ನಾನು ಊರಿನಲ್ಲೇ ಇದ್ದೆ. ನಾನು ಮನೆಯಿಂದ ಮದರಸಗೆ ಹೋಗುತ್ತಿದ್ದೆ.. ಆಗ ಮಲಕುಗಳು ಅಲ್ಲಿನ ಮಕ್ಕಳಲ್ಲಿ, ಮಕ್ಕಳೇ! ಅಲ್ಲಾಹನ ವಲಿಯ್ಯ್ ಗೆ ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿರಿ" ಎಂದು ನನ್ನ ಕುರಿತು ಹೇಳುವುದನ್ನು ನಾನು ಕೇಳುತ್ತಿದ್ದೆ. ಒಮ್ಮೆ ನನ್ನ ಬಳಿ ಒಬ್ಬ ಮಹಾತ್ಮರು ಬಂದರು. ನನಗೆ ಅವರ ಪರಿಚಯವಿರಲಿಲ್ಲ. ಅವರು ಮೇಲಿನಂತೆ ಹೇಳುವುದನ್ನು ಕೇಳಿದರು, ಆಗ ಮಲಕುಗಳಲ್ಲಿ ಒಬ್ಬರೊಂದಿಗೆ ಅವರು ಕೇಳಿದರು, ಈ ಮಗುವಿನ ವಿಶೇಷತೆಯೇನು ?ಆಗ ಮಲಕ್ ಹೇಳಿತು.ಈ ಮಗುವಿನ ಸ್ಥಿತಿ ಅತ್ಯದ್ಭುತ. ಇದಕ್ಕೆ ಎಲ್ಲವನ್ನೂ ನೀಡಲಾಗುತ್ತೆ. ಯಾವುದಕ್ಕೂ ಕೊರತೆಯಿರಲ್ಲ. ಎಲ್ಲಾ ಸೌಕರ್ಯ ಒದಗಿಸಲಾಗುತ್ತದೆ. ಮೋಸವಿರಲ್ಲ. ನಂತರ ನಲ್ವತ್ತು ವರ್ಷ ಬಳಿಕ ಆ ಮಹಾತ್ಮರ ನ್ನು ನಾನು ಭೇಟಿಯಾದೆ. ನೋಡುವಾಗ ಅವರು ಆ ಕಾಲದ ಅಬ್ದಾಲ್ ಎಂಬ ಉನ್ನತ ಔಲಿಯಾಗಳ ವಿಭಾಗಕ್ಕೆ ಸೇರಿದ್ದರು." [ಬಹ್'ಜಾ: 21] ➖➖➖➖➖➖➖➖ ➖➖➖➖➖➖➖➖ ಶೈಖ್ ಜೀಲಾನಿ (...