ಖುರ್‌ಆನ್ ಹೇಳಿದ ಕರಾಮತ್
ಖುರ್‌ಆನ್ ಹೇಳಿದ ಔಲಿಯಾಗಳ ಕರಾಮತ್ ▪️ಮಹಾತ್ಮರಾದ ಔಲಿಯಾಗಳ ಕರಾಮತ್ ಬಗ್ಗೆ ಮುಸ್ಲಿಂ ವಿದ್ವಾಂಸರು ಏನಾದರೂ ಹೇಳಿದರೆ, ಅದನ್ನು ಅವಹೇಳಿಸುವ, ಡಿಂಗನ ಕಥೆಗಳೆಂದು ಹಿಯಾಳಿಸುವ ನೂತನವಾದಿಗಳನ್ನು ನೀವು ಕಾಣಬಹುದು. ಇದಕ್ಕೆ ಕಾರಣ.. ಮಹಾತ್ಮರೊಂದಿಗೆ ಅವರಿಗಿರುವ ಅಲರ್ಜಿ.. ಕರಾಮತ್‌ನೊಂದಿಗೆ ಅವರಿಗಿರುವ ಅಸಡ್ಡೆ.. ▪️ಥೇಟ್ ಮುನಾಫಿಕ್‌ಗಳಂತೆ. ಪ್ರವಾದಿ ﷺ ಏನಾದರೂ ಅದ್ಭುತ ತೋರಿಸಿದರೆ ಕೂಡಲೇ ಮುನಾಫಿಕ್‌ಗಳು ಕಾಫಿರರೊಂದಿಗೆ ಸೇರಿ ತಮಾಷೆ ಮಾಡುತ್ತಿದ್ದರು. 💜ಖುರ್‌ಆನ್ ನಲ್ಲಿರುವ ಕರಾಮತ್‌ಗಳು ಡಿಂಗನ ಕಥೆಗಳೇ ? ಕರಾಮತ್ತನ್ನು ಡಿಂಗನ ಕಥೆಗಳೆಂದು ಅವಹೇಳಿಸುವ ಸಲಫಿಗಳೇ ಖುರ್‌ಆನ್ ನಲ್ಲಿರುವ ಅತ್ಯಧ್ಬುತಕರವಾದ ಕರಾಮತ್‌ಗಳ ಬಗ್ಗೆ ಏನು ಹೇಳುತ್ತೀರಿ ? ಅದನ್ನು ಅಂಗೀಕರಿಸುತ್ತೀರಾ ? ಇಲ್ಲವಾ ? 💜 ಖುರ್‌ಆನ್ ಹೇಳಿದ ಕರಾಮತ್‌ಗಳು. 💜 ಪ್ರವಾದಿ ಈಸಾ ( ಅ ) ಕಲಸು ಮಣ್ಣಿನಿಂದ ಪಕ್ಷಿಯ ರೂಪ ಮಾಡಿ, ಅದಕ್ಕೆ ಊದಿದಾಗ ಅದು ಜೀವಂತ ಪಕ್ಷಿಯಾಗಿ ಹಾರಿ ಹೋಯಿತು. 💜 ಪ್ರವಾದಿ ಈಸಾ ( ಅ ) ಜನ್ಮತಃ ಕುರುಡರನ್ನೂ, ಪಾಂಡು ರೋಗಿಗಳನ್ನು ಗುಣ ಪಡಿಸುತ್ತಿದ್ದರು. ಜನರು ತಿಂದದ್ದನ್ನು, ಮನೆಯಲ್ಲಿ ಸಂಗ್ರಹಿಸಿದ್ದನ್ನು ಹೇಳುತ್ತಿದ್ದರು. ಮರಣ ಹೊಂದಿದವರನ್ನು ಜೀವಂತಗೊಳಿಸುತ್ತಿದ್ದರು. ( ಸೂರಾ ಅಲ್ ಇಮ್ರಾನ್ 49 ) 💜 ಪ್ರವಾದಿ ಈಸಾ ( ಅ ) ಶಿಶುವಾಗಿದ್ದಾಗಲೇ ಮಾತನಾಡಿದ್ದರು. 💜 ಏಳು ಮಂದಿ ಮಹಾತ್ಮರು ಗುಹೆಯಲ್ಲಿ ...